ಪಾಕಿಸ್ತಾನದ 20 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹಿಂದು ಸಮುದಾಯಕ್ಕೆ ಸೇರಿದ ದರ್ಶನ್ ಲಾಲ್ ಎಂಬುವರಿಗೆ ಸಚಿವ ಸ್ಥಾನ ಸಿಕ್ಕಿದೆ ಎಂದು ಮಾಧ್ಯಮಗಳು ಸುದ್ದಿ ಬಿತ್ತರಿಸಿವೆ.

ಇಸ್ಲಮಾಬಾದ್(ಆ.07): ಪಾಕಿಸ್ತಾನದ 20 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹಿಂದು ಸಮುದಾಯಕ್ಕೆ ಸೇರಿದ ದರ್ಶನ್ ಲಾಲ್ ಎಂಬುವರಿಗೆ ಸಚಿವ ಸ್ಥಾನ ಸಿಕ್ಕಿದೆ ಎಂದು ಮಾಧ್ಯಮಗಳು ಸುದ್ದಿ ಬಿತ್ತರಿಸಿವೆ.

ಖಂಡಿತ, ಈ ಸುದ್ದಿ ಸತ್ಯ ಎಂಬು ದರಲ್ಲಿ ಎಳ್ಳಷ್ಟೂ ಅನುಮಾನವಿಲ್ಲ. ಆದರೆ, ಕೆಲ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಪಾಕಿಸ್ತಾನದ ನೂತನ ಪ್ರಧಾನಿ ಶಾಹಿದ್ ಖಾಖನಿ ಅಬ್ಬಾಸಿ ಅವರ ಫೋಟೋ ಅನ್ನೇ ದರ್ಶನ್ ಲಾಲ್ ಎಂದು ತಪ್ಪಾಗಿ ಮುದ್ರಿಸಲಾಗಿರುವುದು ಕಂಡುಬಂದಿದೆ.

ಹೌದು, ಹಲವು ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು ಷರೀಫ್ ಅವರ ಉತ್ತರಾಧಿಕಾರಿಯಾಗಿ ಪಾಕ್ ಪ್ರಧಾನಿಯಾದ ಅಬ್ಬಾಸಿ ಚಿತ್ರಕ್ಕೆ ದರ್ಶನ್ ಲಾಲ್ ಎಂಬ ಕ್ಯಾಪ್ಷನ್ ಬರೆದು ಪ್ರಕಟಿಸಿವೆ. ಎಲ್ಲ ಮುದ್ರಣ ಮತ್ತು ವಿದ್ಯುನ್ಮಾನಗಳಲ್ಲಿ ಬಿತ್ತರಿಸಲಾದ ಫೋಟೊ ದರ್ಶನ್ ಲಾಲ್ ಎಂದಾದರೆ, ಅಬ್ಬಾಸಿ ಯಾರು ಎಂಬ ಪ್ರಶ್ನೆ ಸರ್ವೇಸಾಮಾನ್ಯವಾಗಿ ಉದ್ಭವವಾಗುತ್ತದೆ. ಹಾಗಾಗಿ, ನಿಜವಾದ ದರ್ಶನ್ ಲಾಲ್ ಯಾರು ಮತ್ತು ಅಬ್ಬಾಸಿ ಯಾರು ಎಂಬುದರ ಕುರಿತು ವಿಶ್ಲೇಷಣೆ ಯಲ್ಲಿ ತೊಡಗಲು ಮುಂದಾ ದೆವು.

ಈ ವೇಳೆ ಅಬ್ಬಾಸಿ ಚಿತ್ರವನ್ನೇ ದರ್ಶನ್ ಎಂದು ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳು ‘ಾವಿಸಿವೆ ಎಂಬುದು ತಿಳಿದು ಬಂದಿದೆ. ಅಲ್ಲದೆ, ತಮ್ಮ ವೀಕ್ಷಕರಿಗೆ ಮೊದಲಿಗೆ ತಾವೇ ಸುದ್ದಿಯನ್ನು ನೀಡಬೇಕು ಎಂಬ ಧಾವಂತದಲ್ಲಿ ದರ್ಶನ್ ಲಾಲ್ ಚಿತ್ರದ ಬದಲಿಗೆ ಅಬ್ಬಾಸಿ ಚಿತ್ರವನ್ನು ಪ್ರಕಟಿಸಿ ಅಚಾತುರ್ಯ ಸೃಷ್ಟಿಸಿವೆ. ಮತ್ತೆ ಕೆಲವು ಮಾಧ್ಯಮಗಳಿಗೆ ಈ ಬಗ್ಗೆ ಸ್ಪಷ್ಟನೆ ಇಲ್ಲದಿರುವುದರಿಂದ ಅಡಿಬರಹವಿಲ್ಲದಿರುವ ಚಿತ್ರವನ್ನು ಮಾತ್ರ ಪ್ರಕಟಿಸಲಾಗಿದೆ ಎಂಬ ವಾಸ್ತವಾಂಶ ತಿಳಿದುಬಂದಿದೆ