ಏರ್ಪೋರ್ಟ್ ಮಾದರಿಯಲ್ಲೇ ಹೆಲಿಕಾಪ್ಟರ್’ಗಳಿಗೆ ಅಭಿವೃದ್ಧಿಪಡಿಸಲಾದ ದೇಶದ ಮೊದಲ ಹೆಲಿಪೋರ್ಟ್ ಇದಾಗಿದೆ. ದೆಹಲಿಯ ರೋಹಿಣಿಯಲ್ಲಿರುವ ಹೆಲಿಪೋರ್ಟನ್ನು ಪವನ್ ಹಂಸ್ ಸಂಸ್ಥೆ ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದೆ.
ನವದೆಹಲಿ (ಫೆ. 28): ದೇಶದ ಪ್ರಪ್ರಥಮ ಇಂಟಿಗ್ರೇಟೆಡ್ ಹೆಲಿಪೋರ್ಟ್’ಅನ್ನು ಇಂದು ಕೇಂದ್ರ ಸಚಿವ ಅಶೋಕ್ ಗಜಪತಿ ರಾಜು ದೇಶಕ್ಕೆ ಸಮರ್ಪಿಸಿದರು.
ಏರ್ಪೋರ್ಟ್ ಮಾದರಿಯಲ್ಲೇ ಹೆಲಿಕಾಪ್ಟರ್’ಗಳಿಗೆ ಅಭಿವೃದ್ಧಿಪಡಿಸಲಾದ ದೇಶದ ಮೊದಲ ಹೆಲಿಪೋರ್ಟ್ ಇದಾಗಿದೆ. ದೆಹಲಿಯ ರೋಹಿಣಿಯಲ್ಲಿರುವ ಹೆಲಿಪೋರ್ಟನ್ನು ಪವನ್ ಹಂಸ್ ಸಂಸ್ಥೆ ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದೆ.
ಹೆಲಿಪೋರ್ಟ್’ನಲ್ಲಿ 150 ಪ್ರಯಾಣಿಕರ ಸಾಮರ್ಥ್ಯವಿರುವ ಟರ್ಮಿನಲ್ ಕಟ್ಟಡ, 16 ಹೆಲಿಕಾಪ್ಟರ್’ಗಳನ್ನು ನಿಲ್ಲಿಸಬಹುದಾದ 4 ಹ್ಯಾಂಗರ್’ಗಳು (ನಿಲ್ದಾಣಗಳು), ಹಾಗೂ 9 ಪಾರ್ಕಿಂಗ್ ಬೇ’ಗಳು ಇವೆ. ಹೆಲಿಕಾಪ್ಟರ್ ಪರಿಶೀಲನೆ, ನಿರ್ವಹಣೆ ಮತ್ತು ರಿಪೇರಿ ಸೌಲಭ್ಯಗಳೂ ಈ ಹೆಲಿಪೋರ್ಟ್’ನಲ್ಲಿ ಲಭ್ಯವಿದೆ.

ಹೆಲಿಕಾಪ್ಟರ್ ಟೇಕ್ ಆಫ್ ಮತ್ತು ಲ್ಯಾಂಡಿಗ್ ವ್ಯವಸ್ಥೆಯಲ್ಲದೇ ಪ್ರತ್ಯೇಕ ಏರ್ ಟ್ರಾಫಿಕ್ ಕಂಟ್ರೋಲ್ (ಏಟಿಸಿ) ಹಾಗೂ ಇಂಧನ ಪೂರೈಕೆ ವ್ಯವಸ್ಥೆಗಳನ್ನು ಕೂಡ ಹೊಸ ಹೆಲಿಪೋರ್ಟ್ ಒಳಗೊಂಡಿದೆ.
ಸದ್ಯಕ್ಕೆ ಈ ಹೆಲಿಪೋರ್ಟನ್ನು ತುರ್ತುಸಂದರ್ಭಗಳಲ್ಲಿ, ಪ್ರಕೃತಿ ವಿಕೋಪ ನಿರ್ವಹಣೆಗಾಗಿ, ಹಾಗೂ ಕಾನೂ ಮತ್ತು ಸುವ್ಯವಸ್ಥೆ ಉದ್ದೇಶಕ್ಕಾಗಿ ಬಳಸಲಾಗುವುದು.
ತಲುಪಲು ಕ್ಲಿಷ್ಟಕರವಾಗಿರುವ ಸ್ಥಳಗಳಿಗೆ, ಅಂಡಮಾನ್ & ನಿಕೋಬಾರ್ ಹಾಗೂ ಲಕ್ಷದ್ವೀಪದಂತಹ ಸ್ಥಳಗಳಿಗೆ ತಲುಪಲು ಮತ್ತು ಹೆಲಿ-ಟೂರಿಸಮನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲೂ ಹೆಲಿಪೋರ್ಟ್’ಗಳು ಪ್ರಮುಖ ಪಾತ್ರ ವಹಿಸುತ್ತವೆ.