ಶನಿವಾರ ಬೆಳಗ್ಗೆ 11ರ ಸುಮಾರಿಗೆ ಅಗ್ನಿ ಅನಾಹುತ ಸಂಭವಿಸಿದ್ದು, ಪ್ರಾಣಾಪಾಯವಾಗಿಲ್ಲ.

ಬೆಂಗಳೂರು(ಏ.16): ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ‘ಹರ ಹರ ಮಹಾದೇವ' ಧಾರಾವಾಹಿ ಚಿತ್ರೀಕರಣಕ್ಕೆ ಹಾಕಿರುವ ಸೆಟ್‌ಗೆ ವಿದ್ಯುತ್‌ ಅವಘಡದಿಂದ ಬೆಂಕಿ ತಗುಲಿ ಸುಮಾರು 1 ಕೋಟಿ ರು. ಅಧಿಕ ಮೊತ್ತದ ಚಿತ್ರೀಕರಣದ ವಸ್ತುಗಳು ಭಸ್ಮವಾಗಿರುವ ಘಟನೆ ಮುಂಬೈನ ಹೊರವಲಯ ದಲ್ಲಿ ನಡೆದಿದೆ. ಅಲ್ಲದೇ ವಿದ್ಯುತ್‌ ಅವಘಡದಿಂದ ಹರ ಹರ ಮಹಾದೇವ್‌ ಸೇರಿದಂತೆ ಸ್ಟಾರ್‌ ಪ್ಲಸ್‌ನ ಹಿಂದಿ ಧಾರಾವಾಹಿಯ ಚಿತ್ರೀಕರಣಕ್ಕೆ ಅಡಚಣೆಯಾ ಗಿದೆ ಎಂದು ಮೂಲಗಳು ತಿಳಿಸಿವೆ. ಶನಿವಾರ ಬೆಳಗ್ಗೆ 11ರ ಸುಮಾರಿಗೆ ಅಗ್ನಿ ಅನಾಹುತ ಸಂಭವಿಸಿದ್ದು, ಪ್ರಾಣಾಪಾಯವಾಗಿಲ್ಲ. ನಿಖಿಲ್‌ ಸಿನ್ಹಾ ನಿರ್ದೇಶನದ ಹರ ಹರ ಮಹಾದೇವ ಧಾರಾವಾಹಿ ಕನ್ನಡದ ಮಟ್ಟಿಗೆ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಪೌರಾಣಿಕ ಹಿನ್ನೆಲೆಯ ಈ ಕತೆಯಲ್ಲಿ ಮೂಲ ಕತೆಯ ಚಿತ್ರೀಕರಣ ನಡೆದಿದ್ದು ಮುಂಬೈನ ಅದ್ಧೂರಿ ಸೆಟ್‌ಅನ್ನು ಬಳಸಿಕೊಳ್ಳಲಾಗಿತ್ತು ಎಂದು ತಿಳಿದು ಬಂದಿದೆ.