ಪವರ್ ಮಿನಿಸ್ಟರ್’ಗೆ ಎದುರಾಗಿದೆ ಬಂಧನದ ಭೀತಿ; ಡಿಕೆಶಿ ವಿರುದ್ಧ ಎಫ್’ಐಆರ್ ದಾಖಲು

First Published 15, Feb 2018, 9:27 AM IST
FIR Lodge against Power Minister D K Shivkumar
Highlights

ಇಂಧನ ಸಚಿವ ಡಿ.ಕೆ. ಶಿವಕುಮಾರ್​ಗೆ ಬಂಧನ ಭೀತಿ ಶುರುವಾಗಿದೆ. ಐಟಿ ದಾಳಿ ವಿಚಾರವಾಗಿ ಎಫ್​ಐಆರ್​ ದಾಖಲಾಗಿದೆ. ಸರ್ಕಾರದ ಪವರ್​ ಫುಲ್​ ಮಿನಿಸ್ಟರ್​ ಅಂತಲೇ  ಕರೆಸಿಕೊಳ್ಳುವ  ಡಿ.ಕೆ.ಶಿವಕುಮಾರ್​ಗೆ  ಇದೀಗ ಸಂಕಷ್ಟ ಎದುರಾಗಿದೆ.   

ಬೆಂಗಳೂರು (ಫೆ.14):  ಇಂಧನ ಸಚಿವ ಡಿ.ಕೆ. ಶಿವಕುಮಾರ್​ಗೆ ಬಂಧನ ಭೀತಿ ಶುರುವಾಗಿದೆ. ಐಟಿ ದಾಳಿ ವಿಚಾರವಾಗಿ ಎಫ್​ಐಆರ್​ ದಾಖಲಾಗಿದೆ. ಸರ್ಕಾರದ ಪವರ್​ ಫುಲ್​ ಮಿನಿಸ್ಟರ್​ ಅಂತಲೇ  ಕರೆಸಿಕೊಳ್ಳುವ  ಡಿ.ಕೆ.ಶಿವಕುಮಾರ್​ಗೆ  ಇದೀಗ ಸಂಕಷ್ಟ ಎದುರಾಗಿದೆ.   
ಐಟಿ ದಾಳಿ ವೇಳೆ ಹಾಳೆ ಹರಿದು ಖೆಡ್ಡಾಗೆ ಬಿದ್ದಿದ್ದ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಇದೀಗ ಬಂಧನದ  ಭೀತಿಯಲ್ಲಿದ್ದಾರೆ.  ಸಚಿವ ಡಿ.ಕೆ. ಶಿವಕುಮಾರ್​ ವಿರುದ್ಧ  ಎಫ್'​ಐಆರ್​ ದಾಖಲಾಗಿರುವ  ಎಕ್ಸ್​'ಕ್ಲೂಸಿವ್​ ಸುದ್ದಿಯನ್ನು  ಮೊದಲು​ ಬ್ರೇಕ್​ ಮಾಡಿದ್ದೇ ಸುವರ್ಣನ್ಯೂಸ್​. ನಿನ್ನೆ ರಾತ್ರಿ 9 ಗಂಟೆಗೆ ಸುದ್ದಿಯನ್ನ ರಾಜ್ಯದ ಜನತೆಗೆ ಮೊದಲು ತಿಳಿಸಿದ್ದೇ ನಾವು. ಇನ್ನು  ಇಂಧನ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಕ್ರಿಮಿನಲ್ ಪ್ರಾಸಿಕ್ಯೂಷನ್ ಗೆ ಐಟಿ ಅಧಿಕಾರಿಗಳು ಮನವಿ ಮಾಡಿದ ಹಿನ್ನೆಲೆಯಲ್ಲಿ  ಬೆಂಗಳೂರು ಆರ್ಥಿಕ ಅಪರಾಧಗಳ ನ್ಯಾಯಪೀಠ ಎಫ್ಐಆರ್​ ದಾಖಲಿಸಿದೆ.

ಪ್ರಮುಖ ಸಾಕ್ಷ್ಯಗಳ ನಾಶಕ್ಕೆ ಡಿ.ಕೆ.ಶಿವಕುಮಾರ್ ಯತ್ನಿಸಿರುವ ಆರೋಪ ಹಿನ್ನೆಲೆಯಲ್ಲಿ   ಮಾರ್ಚ್ 22 ಕ್ಕೆ ಕೋರ್ಟ್ ಗೆ ಹಾಜರಾಗಲು ಸೂಚನೆ  ನೀಡಲಾಗಿದೆ. ಈ ಸಂಬಂಧ ಸಚಿವ ಡಿ.ಕೆ.ಶಿವಕುಮಾರ್ ಗೆ ಆರ್ಥಿಕ ಅಪರಾಧಗಳ ಕೋರ್ಟ್ ನೋಟಿಸ್ ಜಾರಿ ಮಾಡಿದ್ದು ,  ಡಿ.ಕೆ.ಶಿ ಈಗ ಬೇಲ್ ಪಡೆಯಬೇಕಾದ ಅನಿವಾರ್ಯತೆ ಎದುರಾಗಿದೆ. 

ಡಿ.ಕೆ.ಶಿವಕುಮಾರ್ ವಿರುದ್ಧ ಕ್ರಿಮಿನಲ್ ಪ್ರಾಸಿಕ್ಯೂಷನ್ ಅನುಮತಿ ನೀಡಲಾಗಿದ್ದು, ಐಪಿಸಿ ಸೆಕ್ಷನ್ 201, 204 ಹಾಗೂ ಐಟಿ ಕಾಯ್ದೆ 276 ಸಿ ಅಡಿಯಲ್ಲಿ ಕೇಸ್ ದಾಖಲಾಗಿದೆ.  ಐಟಿ ಕಾಯ್ದೆ 276 - ಉದ್ದೇಶಪೂರ್ವಕವಾಗಿ ತೆರಿಗೆ ವಂಚನೆ ಆರೋಪದಡಿಯಲ್ಲಿ  6 ತಿಂಗಳಿನಿಂದ 7 ವರ್ಷದವರೆಗೂ ಜೈಲು ಶಿಕ್ಷೆಗೆ ಗುರಿಪಡಿಸುವ ಅವಕಾಶ ಇದೆ. ಇನ್ನು.  ಐಪಿಸಿ 201 ಹಾಗೂ 204 - ಸಾಕ್ಷ್ಯಗಳನ್ನು ನಾಶ ಮಾಡಿರುವ ಆರೋಪ ಈ ಸೆಕ್ಷನ್ ಗಳ ಅಡಿ ಕೇಸ್​ ದಾಖಲಾಗಿದೆ.  ಐಟಿ ದಾಳಿ ವೇಳೆ  ಡಿಕೆ ಶಿವಕುಮಾರ್​ ಜೇಬಿನಲ್ಲಿದ್ದ   ಸಣ್ಣ ಸಣ್ಣ ಕಾಗದದ ಚೂರು ಪತ್ತೆಯಾಗಿತ್ತು.  ಕಾಗದದ ಚೂರುಗಳೆಲ್ಲವನ್ನೂ ಸಂಗ್ರಹಿಸಿ   ಐಟಿ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದರು.  ಡಿಕೆಶಿ ಜತೆಗೆ ಹಲವು ಕಂಪನಿಗಳು ಹಾಗೂ ವ್ಯಕ್ತಿಗಳ ಹಣಕಾಸು ವ್ಯವಹಾರ ಇರೋದು  ಕಂಡು ಬಂದಿತ್ತು. 

 

loader