ಲೋಕಾಯುಕ್ತರಿಗೆ ಚಾಕು ಇರಿತ; ಆರೋಪಿ ವಿರುದ್ಧ ಎಫ್’ಐಆರ್ ದಾಖಲು

First Published 7, Mar 2018, 10:04 PM IST
FIR Lodge Against on Tej Raj Sharma
Highlights

ಲೋಕಾಯುಕ್ತ ವಿಶ್ವನಾಥ್ ಶೆಟ್ಟಿಯವರಿಗೆ ಚಾಕುವಿನಿಂದ ಇರಿದ ತೇಜ್ ರಾಜ್ ಶರ್ಮಾ ವಿರುದ್ಧ  ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್’ಐಆರ್ ದಾಖಲಾಗಿದೆ. 

ಬೆಂಗಳೂರು (ಮಾ. ೦7): ಲೋಕಾಯುಕ್ತ ವಿಶ್ವನಾಥ್ ಶೆಟ್ಟಿಯವರಿಗೆ ಚಾಕುವಿನಿಂದ ಇರಿದ ತೇಜ್ ರಾಜ್ ಶರ್ಮಾ ವಿರುದ್ಧ  ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್’ಐಆರ್ ದಾಖಲಾಗಿದೆ. 

ಐಪಿಸಿ ಸೆಕ್ಷನ್ 307 - ಕೊಲೆ ಯತ್ನ, 353 - ಸರ್ಕಾರಿ ಅಧಿಕಾರಿ ಕರ್ತವ್ಯಕ್ಕೆ ಅಡ್ಡಿ, ಹಲ್ಲೆ,  506 ಬಿ- ಜೀವ ಬೆದರಿಕೆ, 120 ಬಿ - ಅಪರಾಧಕ್ಕೆ ಒಳಸಂಚು, 143 - ಕಾನೂನುಬಾಹಿರವಾಗಿ ಸೇರುವುದು 147 - ಗಲಭೆ ಕೃತ್ಯ, 343 -ಕಾನೂನುಬಾಹಿರವಾಗಿ ಕರ್ತವ್ಯಕ್ಕೆ ಅಡ್ಡಿಪಡಿಸುವ ಕೃತ್ಯ ಅಡಿಯಲ್ಲಿ  ತೇಜಸ್ ಶರ್ಮಾ ವಿರುದ್ಧ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಈಗಾಗಲೇ ಆರೋಪಿ ತೇಜಸ್ ಶರ್ಮಾಗೆ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಮುಕ್ತಾಯಗೊಂಡಿದೆ.  ನಾಳೆ ಮಧ್ಯಾಹ್ನ ಕೋರ್ಟ್ ಕಟಕಟೆಗೆ ಕರೆದುಕೊಂಡು ಹೋಗಲಾಗುತ್ತದೆ. 

ನಾಳೆ ಮಧ್ಯಾಹ್ನ 8ನೇ ಎಸಿಎಂಎಂ ಕೋರ್ಟ್ ಗೆ ಆರೋಪಿ ತೇಜ್ ರಾಜ್ ಶರ್ಮಾರನ್ನು ಹಾಜರುಪಡಿಸಲು ಸಿದ್ಧತೆ ನಡೆದಿದೆ. ಎರಡು ದಿನಗಳ ಕಾಲ ವಿಚಾರಣೆಗೆ ನ್ಯಾಯಾಲಯಕ್ಕೆ ಕೋರಲು ನಿರ್ಧಾರ ಮಾಡಲಾಗಿದೆ. 
 

loader