ಚೆನೈ (ಸೆ.30): ಸಾಮಾಜಿಕ ಜಾಲತಾಣಗಳಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಾಲಲಿತಾ ನಿಧನ ಹೊಂದಿದ್ದಾರೆಂಬ ವದಂತಿ ಹರಡಿದ ಆರೋಪದಲ್ಲಿ ಪೊಲೀಸರು ಮಹಿಳೆಯೊಬ್ಬಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ..
ಜಯಾಲಲಿತಾ ಎರಡು ದಿನಗಳ ಹಿಂದೆ ಮೃತಪಟ್ಟಿದ್ದಾರೆ ಎಂದು ನಂಬಲಾರ್ಹಾ ಮೂಲಗಳಿಂದ ತಿಳಿದುಬಂದಿದೆ ಎಂದು ಗುರುವಾರ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ತನ್ನನ್ನು ಲೇಖಕಿ ಎಂದು ಗುರುತಿಸಿಕೊಂಡ ಮಹಿಳೆಯೊಬ್ಬಳು ಬರೆದುಕೊಂಡಿದ್ದಳು ಎನ್ನಲಾಗಿದೆ.
ತಮಿಳುನಾಡಿನಲ್ಲಿ ಕೋಮು ಗಲಭೆಗಳನ್ನು ನಡೆಸಲು ಆರೆಸ್ಸೆಸ್ ಜಯಾಲಲಿತಾರನ್ನು ಕೊಂದಿರುವುದಾಗಿ ಆಕೆ ಬರೆದುಕೊಂಡಿದ್ದಳು. ಸ್ವಾತಿ ಹತ್ಯೆ ಪ್ರಕರಣ, ವಿಶ್ವ ಹಿಂದೂ ಪರಿಷತ್ ನಾಯಕ ಸೂರಿ, ಹಿಂದೂ ಮುನ್ನನಿ ನಾಯಕ ಶಶಿಕುಮಾರ್ ಹತ್ಯೆಗಳನ್ನು ಉಲ್ಲೇಖಿಸಿರುವ ಆಕೆ, ಆರೆಸ್ಸೆಸ್’ಗೆ ತನ್ನ ಯೋಜನೆಗಳನ್ನು ಕಾರ್ಯಗತಗೊಳಿಸಲು ಜಯಾಲಲಿತಾ ದೊಡ್ಡ ತಡೆಯಾಗಿದ್ದರು ಎಂದು ಬರೆದುಕೋಂಡಿದ್ದಳು ಎನ್ನಲಾಗಿದೆ.
ಸರ್ಕಾರವು ಮುಖ್ಯಮಂತ್ರಿ ಆರೋಗ್ಯದ ಬಗ್ಗೆ ಸಾರ್ವಜನಿಕರಿಗೆ ವಾಸ್ತವಾಂಶವನ್ನು ತಿಳಿಸುವ ಮೂಲಕ ಸಂಶಯಗಳಿಗೆ ಇತಿಶ್ರೀ ಹಾಡಬೇಕು ಎಂದು ಆಕೆ ಆ ಪೋಸ್ಟ್’ನಲ್ಲಿ ಆಗ್ರಹಿಸಿದ್ದಳು. ಆಕೆಯ ಪೋಸ್ಟ್ ವಿರುದ್ಧ ಎಐಎಡಿಎಂಕೆ ಐಟಿ ವಿಭಾಗವು ಪೊಲೀಸರಿಗೆ ದೂರು ಸಲ್ಲಿಸಿತ್ತು.
