ಮುಂಬೈ (ಸೆ.19): ನಟ ಕಪಿಲ್ ಶರ್ಮಾ ಅವರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪರಿಸರ ಕಾಯ್ದೆ ಉಲ್ಲಂಘಿಸಿ ತಮ್ಮ ಮನೆಯ ಹಿಂದೆ ಅವಶೇಷಗಳನ್ನು ಹಾಕಿದ ಆರೋಪದ ಮೇಲೆ ವೆರ್ಸೊವ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಅಲ್ಲದೆ ಅಕ್ರಮವಾಗಿ ಕಟ್ಟಡ ನಿರ್ಮಿಸುತ್ತಿರುವ ಆರೋಪ ಎದುರಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಪಿಲ್ ಶರ್ಮಾ ಅವರು ಮ್ಯಾಂಗ್ರೋವ್ ನಲ್ಲಿ ಪರಿಸರ ಕಾಯ್ದೆ ಉಲ್ಲಂಘಿಸಿ ಅವಶೇಷಗಳನ್ನು ಡಂಪ್ ಮಾಡಿರುವ ಬಗ್ಗೆ ಸಮೀಕ್ಷೆ ಮಾಡುವಂತೆ ಮುಂಬೈ ಉಪನಗರ ಜಿಲ್ಲಾಧಿಕಾರಿ ದೀಪೇಂದ್ರ ಸಿಂಗ್ ಖುಸ್ವಾ ಅವರು ಆದೇಶಿಸಿದ್ದರು.
ಸಮೀಕ್ಷೆಯ ನಂತರ ಅಂದೇರಿ ತಲಾಟಿ ಹ್ಯಾಸ್ಯ ನಟನ ವಿರುದ್ಧ ದೂರು ದಾಖಲಿಸಿದ್ದಾರೆ. ಪರಿಸರ ಕಾಯ್ದೆಯಡಿ ಕಪಿಲ್ ಶರ್ಮಾ ವಿರುದ್ಧ ನಾವು ಎಫ್ಐಆರ್ ದಾಖಲಿಸಿದ್ದೇವೆ ಎಂದು ಮುಂಬೈ ಪೊಲೀಸ್ ವಕ್ತಾರ ಡಿಸಿಪಿ ಅಶೋಕ್ ದುಧೆ ಅವರು ತಿಳಿಸಿದ್ದಾರೆ.
