ಮಿರ್ಜಾಪುರ[ಸೆ. 02]  ನೂರಕ್ಕೂ ಅಧಿಕ ಮಕ್ಕಳು ಮಧ್ಯಾಹ್ನದ ಬಿಸಿಯೂಟದ ಚಪಾತಿಯನ್ನು ಉಪ್ಪಿನೊಂದಿಗೆ ತಿನ್ನುತ್ತಿದ್ದಾರೆ ಎಂಬ ವಿಡಿಯೋವನ್ನು ಹರಿಯಬಿಟ್ಟ ಪತ್ರಕರ್ತರೊಬ್ಬರ ಮೇಲೆ ಎಫ್ ಐ ಆರ್ ದಾಖಲಾಗಿದೆ.

ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯ ಸಿಯೂರ್  ಹಳ್ಳಿಯಲ್ಲಿನ ಮಕ್ಕಳು ಬಿಸಿಯೂಟದ ಸಮಯದಲ್ಲಿ ಉಪ್ಪು ಹಚ್ಚಿಕೊಂಡು ಚಪಾತಿ ತಿಂದ ವಿಡಿಯೋವನ್ನು ಆಗಸ್ಟ್ 22 ರಂದು  ಶೂಟ್ ಮಾಡಿದ್ದು ಬಿಡಗಡೆ ಮಾಡಿದ ಕಾರಣಕ್ಕೆ ಪತ್ರಕರ್ತ ಸಂಕಷ್ಟ ಎದುರಿಸಬೇಕಾಗಿದೆ. ಸರ್ಕಾರಕ್ಕೆ ಈ ವಿಡಿಯೋ ಕೆಟ್ಟ ಹೆಸರು ತರುತ್ತದೆ ಎಂದು ಆರೋಪಿಸಿಯೂ ಆಗಿದೆ.

ಮಕ್ಕಳಿಗೆ ಚಪಾತಿಯೊಂದಿಗೆ ಕರಿ ನೀಡಲಾಗಿತ್ತು. ಆದರೆ ಈ ಪತ್ರಕರ್ತ ಜನ ಸಂದೇಶ್ ಮಾಧ್ಯಮದ ಪವನ್ ಜೈಸ್ವಾಲ್  ಬೇಕಂತಲೇ  ಫ್ಯಾಕ್ಟ್ ಗಳನ್ನು ತಿರುಚಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೇ ಜತೆಗೆ ಸ್ಥಳೀಯ ವರ್ತಕರೊಬ್ಬರಿಂದ ನಾನೇ ತರಕಾರಿಯನ್ನು ಶಾಲೆಗೆ ಸರಬರಾಜು ಮಾಡಿದ್ದೇನೆ ಎಂದು ಹೇಳಿಕೆಯನ್ನು ದಾಖಲಿಸಲಾಗಿದೆ. ಘಟನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಪತ್ರಕರ್ತ ಜೈಸ್ವಾಲ್ ಇದು ಮಾಧ್ಯಮಗಳ ಮೇಲೆ ಮಾಡುತ್ತಿರುವ ದಾಳಿ ಎಂದು ಆರೋಪಿಸಿದ್ದಾರೆ.