ಮುಂಬೈ, (ಡಿ.09): ಸುಮಾರು 32 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಬಾಲಿವುಡ್ ನಿರ್ಮಾಪಕಿ ಪ್ರೇರಣಾ ಅರೋರ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಶನಿವಾರ ಮುಂಬೈ ಪೊಲೀಸರು ಪ್ರೇರಣಾ ಅರೋರ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಪ್ರೇರಣಾ ಅವರಿಗೆ ಡಿಸೆಂಬರ್ 10 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

 KriArj ಎಂಬ ನಿರ್ಮಾಣ ಸಂಸ್ಥೆಯ ಒಡತಿಯಾಗಿರುವ ಪ್ರೇರಣಾ ಅವರು ಚಿತ್ರಕರ್ಮಿ ವಾಸು ಭಗ್ನಾನಿ ಅವರಿಗೆ 32 ಕೋಟಿ ರು ನೀಡದೆ ವಂಚಿಸಿದ್ದಾರೆ ಎಂಬ ಆರೋಪದ ಮೇಲೆ ಆರ್ಥಿಕ ಅಪರಾಧಗಳ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ರುಸ್ತುಂ, ಪ್ಯಾಡ್ಮ್ಯಾನ್, ಪರಿ, ಟಾಯ್ಲೆಟ್ ಏಕ್ ಪ್ರೇಮ್ ಕಥಾ, ಪರಮಾಣು ಮುಂತಾದ ಚಿತ್ರಗಳನ್ನು ಪ್ರೇರಣಾ ಅವರ ಸಂಸ್ಥೆ ನಿರ್ಮಿಸಿದೆ.