ಬೆಂಗಳೂರು (ಜೂ. 29): ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಈಗ ಚುನಾವಣೆಯ ರಂಗು. ಈಗಾಗಲೇ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ಆಗಿದ್ದು, ಉಳಿದ ಸ್ಥಾನಗಳಿಗೆ ಚುನಾವಣೆ ಮೂಲಕ ಪದಾಧಿಕಾರಿಗಳನ್ನು ಶನಿವಾರ ಆಯ್ಕೆ ಮಾಡಲಾಗುತ್ತದೆ.

ಚಿತ್ರರಂಗದ ಹಲವು ವಲಯಗಳಾದ ಪ್ರದರ್ಶಕರು, ನಿರ್ಮಾಪಕರು, ವಿತರಕರ ನಡುವೆ ಈ ಚುನಾವಣೆ ನಡೆಯುತ್ತಿದೆ. ಅಧ್ಯಕ್ಷರಾಗಿ ಟಿ.ಆರ್‌. ಜಯರಾಜ್‌, ಉಪಾಧ್ಯಕ್ಷರಾಗಿ ವೆಂಕಟರಮಣ ಬಾಬ್ಜಿ, ಕಾರ್ಯದರ್ಶಿಗಳಾಗಿ ಎ.ಗಣೇಶ್‌, ಎ.ನರಸಿಂಹಲು ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಉಳಿದ ಸ್ಥಾನಗಳಿಗೆ ಶನಿವಾರ ಚುನಾವಣೆ ನಡೆಯಲಿದೆ. ಬೆಳಗ್ಗೆ 10.30ಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪಕ್ಕದಲ್ಲೇ ಇರುವ ಗುರುರಾಜ ಕಲ್ಯಾಣ ಮಂಟಪದಲ್ಲಿ ಮತದಾನ ನಡೆಯಲಿದೆ. ಚುನಾವಣೆ ನಡೆದ ದಿನವೇ ಸಂಜೆ 6 ಗಂಟೆ ನಂತರ ಫಲಿತಾಂಶ ಪ್ರಕಟವಾಗಲಿದೆ.