2016-17ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಸಲು ಇವತ್ತು ಕಡೆಯ ದಿನ. ಈ ಗಡುವನ್ನು ವಿಸ್ತರಿಸುವ ಯಾವುದೇ ಯೋಚನೆ ನಮ್ಮ ಮುಂದೆ ಇಲ್ಲ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ನವದೆಹಲಿ(ಜು.31): 2016-17ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಇವತ್ತು ಕಡೆಯ ದಿನ. ಈ ಗಡುವನ್ನು ವಿಸ್ತರಿಸುವ ಯಾವುದೇ ಯೋಚನೆ ನಮ್ಮ ಮುಂದೆ ಇಲ್ಲ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇಲಾಖೆಗೆ ಈಗಾಗಲೇ 2 ಕೋಟಿ ಐಟಿ ರಿಟರ್ನ್ಸ್ ಫೈಲ್ ಬಂದಿದ್ದು, ಉಳಿದವರು ನಿಗದಿತ ಅವಧಿಯಲ್ಲೇ ಫೈಲ್ ಮಾಡಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದರು. ನಿಗದಿತ ಅವಧಿಯೊಳಗೆ ಐಟಿ ರಿಟರ್ನ್ಸ್ ಸಲ್ಲಿಸದಿದ್ದರೆ ಮೊದಲಿಗೆ 5,000 ಹಾಗೂ ನಂತರ 10,000 ರು ದಂಡ ವಿಧಿಸಲಾಗುತ್ತದೆ.
ಐಟಿ ರಿಟರ್ನ್ಸ್ ಸಲ್ಲಿಕೆಗೂ ಮುನ್ನ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಜೋಡಣೆ ಕಡ್ಡಾಯವಾಗಿದ್ದು, ಇದಕ್ಕೂ ಕೂಡಾ ಜುಲೈ 31 ಕೊನೆ ದಿನಾಂಕವಾಗಿದೆ. ಈ ಬಾರಿ ಐಟಿ ರಿಟರ್ನ್ಸ್ ಸಲ್ಲಿಕೆ ಸಮಯದಲ್ಲಿ ನಗದು ಪಾವತಿಯ ವಿವರ ಸರಿಯಾಗಿ ನಮೂದಿಸಬೇಕಾಗುತ್ತದೆ.
ನವೆಂಬರ್ 9ರಿಂದ ಡಿಸೆಂಬರ್ 30, 2016 ರ ಅವಧಿಯಲ್ಲಿ ಅಂದರೆ, ಅಪನಗದೀಕರಣ ಜಾರಿಗೊಂಡ ಬಳಿಕ 2 ಲಕ್ಷಕ್ಕೂ ಅಧಿಕ ನಗದು ಮೊತ್ತವನ್ನು ಬ್ಯಾಂಕಿಗೆ ಜಮೆ ಮಾಡಿದ್ದರೆ, ಆ ವಿವರವನ್ನು ಐಟಿ ರಿಟರ್ನ್ಸ್ ವೇಳೆ ನಮೂದಿಸಬೇಕಾಗುತ್ತದೆ.
