'ಮನೆ ಮನೆಗೆ ಕುಮಾರಣ್ಣ'  ಕಾರ್ಯಕ್ರಮದಲ್ಲಿ ಮಾರಾಮಾರಿ

First Published 11, Feb 2018, 3:17 PM IST
Fighting in Mane Manege Kumaranna Karyakrama
Highlights

'ಮನೆ ಮನೆಗೆ ಕುಮಾರಣ್ಣ'  ಕಾರ್ಯಕ್ರಮದಲ್ಲಿ  ಎಂ.ಟಿ.ಕೃಷ್ಣಪ್ಪ ಬೆಂಬಲಿಗರು ಹಾಗೂ ಗ್ರಾಮಸ್ಥರ ನಡುವೆ ಮಾರಾಮಾರಿ ನಡೆದಿದೆ. 

ತುಮಕೂರು (ಫೆ.11): 'ಮನೆ ಮನೆಗೆ ಕುಮಾರಣ್ಣ'  ಕಾರ್ಯಕ್ರಮದಲ್ಲಿ  ಎಂ.ಟಿ.ಕೃಷ್ಣಪ್ಪ ಬೆಂಬಲಿಗರು ಹಾಗೂ ಗ್ರಾಮಸ್ಥರ ನಡುವೆ ಮಾರಾಮಾರಿ ನಡೆದಿದೆ. 

ತುರುವೇಕೆರೆ ತಾಲೂಕಿನ ಅಮ್ಮಸಂದ್ರದಲ್ಲಿ  ಶಾಸಕ ಎಂ.ಟಿ.ಕೃಷ್ಣಪ್ಪ ನೇತೃತ್ವದದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಎಂ.ಟಿ.ಕೃಷ್ಣಪ್ಪ ಬೆಂಬಲಿಗರು, ಗ್ರಾಮಸ್ಥರ ನಡುವೆ ಜಟಾಪಟಿ ನಡೆದಿದೆ. ಕಾರ್ಯಕ್ರಮದ  ವೇಳೆ ಗ್ರಾಮಸ್ಥರು ಸರಿಯಾಗಿ ಕೆಲಸ ಮಾಡಿಲ್ಲವೆಂದು ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದರಿಂದ ಆಕ್ರೋಶಗೊಂಡ ಕೃಷ್ಣಪ್ಪ ಬೆಂಬಲಿಗರು ಕೆಲ ಗ್ರಾಮಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ.  ಗಂಟೆಗಳ ಕಾಲ ಕಾರ್ಯಕರ್ತರು  ಬಡಿದಾಡಿಕೊಂಡಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.  ಪರಿಸ್ಥಿತಿ ನಿಯಂತ್ರಿಸಲು  ಪೊಲೀಸರು ಹರಸಾಹಸಪಡಬೇಕಾಯಿತು. 
 

loader