ಯಶವಂತಪುರ ಪಾಲಿಕೆ ಸದಸ್ಯ ವೆಂಕಟೇಶ್ ಸೀಡಿ ವಿಚಾರ ಪ್ರಸ್ತಾಪಿಸಿದ ಕಾರಣ ಎರಡೂ ಪಕ್ಷಗಳ ಸದಸ್ಯರ ನಡುವೆ ಈ ಗಲಾಟೆ ಏರ್ಪಟ್ಟಿದೆ.

ಬೆಂಗಳೂರು(ಫೆ.28): ಬಿಬಿಎಂಪಿಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ಮಧ್ಯೆ ಸೀಡಿ ಸಮರ ಏರ್ಪಟ್ಟ ಹಿನ್ನೆಲೆಯಲ್ಲಿ ಹತ್ತಕ್ಕೂ ಹೆಚ್ಚು ಪಾಲಿಕೆ ಸದಸ್ಯರಿಗೆ ಗಾಯವಾಗಿದೆ.

ಯಶವಂತಪುರ ಪಾಲಿಕೆ ಸದಸ್ಯ ವೆಂಕಟೇಶ್ ಸೀಡಿ ವಿಚಾರ ಪ್ರಸ್ತಾಪಿಸಿದ ಕಾರಣ ಎರಡೂ ಪಕ್ಷಗಳ ಸದಸ್ಯರ ನಡುವೆ ಈ ಗಲಾಟೆ ಏರ್ಪಟ್ಟಿದೆ. ಸದಸ್ಯರು ಪರಸ್ಪರ ಕುತ್ತಿಗೆ ಪಟ್ಟಿ ಹಿಡಿದು ಜಗಳವಾಡಿದ್ದಾರೆ. ತಳ್ಳಾಟ ನೂಕಾಟವಾದ ಕಾರಣ 10ಕ್ಕೂ ಹೆಚ್ಚು ಸದಸ್ಯರಿಗೆ ಗಾಯಗೊಂಡಿದ್ದಾರೆ.