ಲಕ್ನೋ(ಡಿ. 10)   ಹೆಣ್ಣು ಮಕ್ಕಳಿಗೆ, ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ಬೀದಿ ಕಾಮಣ್ಣನಿಗೆ ಮಹಿಳಾ ಪೊಲೀಸ್ ಒಬ್ಬರು ಕೊಟ್ಟಿರುವ ಏಟುಗಳು  ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ತಮ್ಮ ಶೂಗಳನ್ನೇ ಶಸ್ತ್ರ ಮಾಡಿಕೊಂಡು ಬೀದಿ ಕಾಮಣ್ಣನಿಗೆ ಗೂಸಾ ನೀಡಿದ್ದಾರೆ. ಉತ್ತರ ಪ್ರದೇಶದ ಕಾನ್ಪುರದ ಈ ಘಟನೆಗೆ ಸೋಶಿಯಲ್ ಮೀಡಿಯಾ ಭಲೇ ಭಲೇ ಎಂದಿದೆ.

ಚಪ್ಪಲಿ ಕಿತ್ತುಹೋಗುವಂತೆ ಉಡುಪಿ ಕಾಮಣ್ಣನಿಗೆ ಗೂಸಾ

ನಿರಂತರವಾಗಿ ಬೀದಿ ಕಾಮಣ್ಣನಿಗೆ ಗೂಸಾ ನೀಡುತ್ತಿದ್ದ ಮಹಿಳಾ ಪೇದೆ ಮತ್ತಷ್ಟು ಆಕ್ರೋಶಗೊಂಡು ತಮ್ಮ ಶೂಗಳನ್ನು ತೆಗೆದುಕೊಂಡು ಬಾರಿಸಲು ಆರಂಭಿಸಿದ್ದಾರೆ.

ನಿನಗೆ ಅಕ್ಕ ತಂಗಿಯರು ಇಲ್ಲವಾ? ನಿನಗೇನು ಹುಚ್ಚು ಹಿಡಿದಿದೇಯಾ? ಎಂದು ಬಾಯಿಗೆ ಬಂದಂತೆ ಬೈಯುತ್ತ ಯುವಕನನ್ನು ಹಿಗ್ಗಾ ಮುಗ್ಗಾ ಬಾರಿಸಿದ್ದಾಳೆ.

ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಮಹಿಳಾ ಪೇದೆಯನ್ನು ಚಂಚಲ್ ಚೌರಾಸೀಯಾ ಎಂದು ಗುರುತಿಸಲಾಗಿದ್ದು ಬಿತೂರ್ ನ  ಬೀದಿ   ರೋಮಿಯೋ ವಿರೋಧಿ ದಳದಲ್ಲಿ ಕೆಲಸ ಮಾಡುತ್ತಿದ್ದಾರೆ.