ಮಡಿಕೇರಿ[ಮಾ.12]: ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಪರೀಕ್ಷೆಗಳು ಆರಂಭವಾಗಲಿವೆ. ವಿದ್ಯಾರ್ಥಿಗಳೆಲ್ಲಾ ನಿದ್ದೆಗೆಟ್ಟು ಓದಲಾರಂಭಿಸಿದ್ದಾರೆ. ಹೀಗಿರುವಾಗಲೇ ಮಡಿಕೇರಿಯ ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆಗೆ ಹೆದರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಹೌದು ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಹೊಸಕೇರಿಯ ಜಸ್ಮಿತಾ(14) ಆತ್ಮಹತ್ಯೆಗೆ ಶರಣಾದ ದುರ್ದೈವಿ. ಫೆ. 11ರಂದು ಗಣಿತ ಪರೀಕ್ಷೆ ಬರೆದು ಮನೆಗೆ ಬಂದಿದ್ದ ಜಸ್ಮಿತಾ ಡೆತ್ ನೋಟ್ ಬರೆದಿಟ್ಟು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 

ಡೆತ್ ನೋಟ್ ನಲ್ಲೇನಿದೆ?

ಡೆತ್ ನೋಟ್ ಬರೆದಿಟ್ಟಿರುವ ಜಸ್ಮಿತಾ 'ತಪ್ಪು ಮಾಡ್ತಿದ್ದೇನೆ, I Love you ಅಪ್ಪ ಅಮ್ಮ. ಮೇನಲ್ಲಿ ನಿಶ್ಚಯ ಆಗಿರೋ ಅಕ್ಕನ ಮದುವೆ ತುಂಬಾ ಚೆನ್ನಾಗಿ ನಡೆಯಬೇಕು. ಪರೀಕ್ಷೆ ಕಷ್ಟವಿತ್ತು ಮಾನ ಮರ್ಯಾದೆ ಹೋಯಿತು' ಎಂದು ಉಲ್ಲೇಖಿಸಿದ್ದಾಳೆ. ಸದ್ಯ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.