ಸಂಸದ ವಿನೋದ್ ಖನ್ನಾ ನಿಧನ ಹೊಂದಿದ್ದಾರೆಂಬ ವದಂತಿಯನ್ನು ನಂಬಿ ಮೇಘಾಲಯ ಬಿಜೆಪಿಯು ಮೌನಾಚರಣೆಯನ್ನು ಹಮ್ಮಿಕೊಂಡ ಘಟನೆ ನಡೆದಿದೆ.
ಶಿಲ್ಲಾಂಗ್ (ಏ.08): ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ, ಸಂಸದ ವಿನೋದ್ ಖನ್ನಾ ನಿಧನ ಹೊಂದಿದ್ದಾರೆಂಬ ವದಂತಿಯನ್ನು ನಂಬಿ ಮೇಘಾಲಯ ಬಿಜೆಪಿಯು ಮೌನಾಚರಣೆಯನ್ನು ಹಮ್ಮಿಕೊಂಡ ಘಟನೆ ನಡೆದಿದೆ. ಅದೊಂದು ವದಂತಿಯೆಂದು ತಿಳಿಯುತ್ತಿದ್ದಂತೆ ಬಿಜೆಪಿ ಸ್ಪಷ್ಟೀಕರಣ ನೀಡಿದೆ.
ವಿನೋದ್ ಖನ್ನಾ ನಿಧನ ಹೊಂದಿದರೆಂಬುವುದು ವದಂತಿಯಾಗಿದೆ, ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆಂದು ಬಿಜೆಪಿ ಹೇಳಿದೆ.
70-80ರ ದಶಕದಲ್ಲಿ ಬಾಲಿವುಡನ್ನು ಆಳಿದ ವಿನೋದ್ ಖನ್ನಾ, ಕಳೆದೈದು ದಶಕಗಳಲ್ಲಿ ಸುಮಾರು 141 ಚಿತ್ರಗಳಲ್ಲಿ ನಟಿಸಿದ್ದಾರೆ. ಬಳಿಕ ರಾಜಕೀಯಕ್ಕೆ ಪ್ರವೇಶಿಸಿದ ಖನ್ನಾ ಪಂಜಾಬ್’’ನ ಗುರುದಾಸ್’ಪುರದಿಂದ ಬಿಜೆಪಿ ಸಂಸದರೂ ಆಗಿದ್ದಾರೆ.
