ಬಳ್ಳಾರಿ(ಸೆ.12): ಅಕ್ರಮ ಸಂಬಂಧದಿಂದ ಹುಟ್ಟಿದ ಮಗು ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಮಗುವನ್ನು ಕೊಲ್ಲಲು ಮುಂದಾಗಿದ್ದ ಘಟನೆ ಬಳ್ಳಾರಿಯ ಹೊಸಪೇಟೆಯಲ್ಲಿ ನಡೆದಿದೆ.
ದುಷ್ಕರ್ಮಿಯೊಬ್ಬ ತನ್ನ ಅಕ್ರಮ ಸಂಬಂಧದಿಂದ ಮಗುವಿಗೆ ತಂದೆಯಾಗಿದ್ದ. ಮಗುವಿನಿಂದ ತನಗೆ ತೊಂದರೆಯಾಗಬಹುದೆಂದು ತನ್ನದೇ ಮಗುವನ್ನು ಜೀವಂತ ಸಮಾಧಿ ಮಾಡಲು ಹೊರಟಿದ್ದ. ಮಗು ಚೀರುವ ಧನಿ ಕೇಳಿ ಓಡಿ ಬಂದ ಆಟೋ ಚಾಲಕನೊಬ್ಬ ನವಜಾತ ಶಿಶುವನ್ನು ಸಾವಿನಿಂದ ರಕ್ಷಿಸಿದ್ದಾನೆ.
ಮಗುವನ್ನು ಜೀವಂತ ಸಮಾಧಿ ಮಾಡಲು ಮುಂದಾಗಿದ್ದ ವ್ಯಕ್ತಿಗೆ ಸಾರ್ವಜನಿಕರು ಥಳಿಸಿದ್ದಾರೆ. ಸದ್ಯ ಮಗು ಮಕ್ಕಳ ರಕ್ಷಣಾ ಘಟಕದಲ್ಲಿ ಸೇಫ್ ಆಗಿದೆ.
