ಚಿತ್ರದುರ್ಗ : ಪುತ್ರನ ಸಾವಿನಿಂದ ನೊಂದಿದ್ದ ತಂದೆಯೂ ಹೃದಯಾಘಾತದಿಂದ ಮೃತಪಟ್ಟ ಘಟನೆ ಇಲ್ಲಿನ ಆಲಘಟ್ಟ ಗ್ರಾಮದಲ್ಲಿ ನಡೆದಿದೆ. 

ಶೇಖರಪ್ಪ ಮೃತ ತಂದೆಯಾಗಿದ್ದು, ಅವರ ಪುತ್ರ ಶಶಿಧರ [32] ಹೊಳಲ್ಕೆರೆ ತಾಲೂಕಿನ ಕೆಪಿಟಿಸಿಎಲ್ ನಲ್ಲಿ ಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿದ್ದರು. 

ಜನವರಿ 31 ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು.  ಪುತ್ರನ ಸಾವಿನಿಂದ ನೊಂದಿದ್ದ ತಂದೆಯೂ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.