ತನ್ನ ಮಗನನ್ನು  ಇನ್ನೊಂದು ಧರ್ಮದ ವ್ಯಕ್ತಿ ಅಪಹರಿಸಿದ್ದು ಆತನ ಮಗಳೊಡನೆ ಬಲವಂತವಾಗಿ ಮದುವೆ ಮಾಡಲು ಪ್ರಯತ್ನಿಸುತ್ತಿದ್ದಾನೆ ಎಂದು ತಂದೆಯು ಆರೋಪಿಸಿದ್ದಾನೆ. ತನ್ನ ಅಪ್ರಾಪ್ತ ಮಗನ ಮದುವೆ ನಿಲ್ಲಿಸಿ, ಆತನನ್ನು ಬಲವಂತವಾಗಿ ಮತಾಂತರ ಮಾಡುತ್ತಿರುವವರ ವಿರುದ್ಧ  ಕಾನೂನು ಕ್ರಮ ಜರುಗಿಸುವಂತೆ ತಂದೆ ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ಮಂಡ್ಯ: ಮುಸ್ಲಿಂ ಮುಖಂಡನೊಬ್ಬ ಹಿಂದು ಜಾತಿಯ ಹುಡುಗನನ್ನು ಅಪರಿಹರಿಸಿ ಮುಸ್ಲಿಂ ಧರ್ಮಕ್ಕೆ ಮಂತಾರಗೊಳಿಸಿ, ತನ್ನ ಮಗಳೊಂದಿಗೆ ಮದುವೆ ಮಾಡಲು ಹೊರಟಿದ್ದಾನೆ ಎಂದು, ಹುಡುಗನ ತಂದೆ ಫೋಲೀಸರಿಗೆ ದೂರು ನೀಡಿದ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣದಲ್ಲಿ ನಡೆದಿದೆ.

ಶ್ರೀನಿವಾಸ್ ಎಂಬ ವ್ಯಕ್ತಿ ಹಿಂದೂಪರ ಸಂಘಟನೆಗಳೊಂದಿಗೆ ತೆರಳಿ, ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಿದ್ದಾರೆ.

ನನ್ನ ಮಗ ಚಂದನ್'​ನನ್ನು ಮುಸ್ಲಿಂ ಮುಖಂಡ ಯೂಸಫ್ ಎಂಬಾತ ಅಪಹರಿಸಿದ್ದು ತನ್ನ ಮಗಳೊಡನೆ ಮದುವೆ ಮಾಡಲು ಆತನಿಗೆ ಬಲವಂತವಾಗಿ ಮುಂಜಿ ಮಾಡಿಸಿ ಮತಾಂತರ ಮಾಡಿಸಿ ಮದುವೆ ಮಾಡಲು ಪ್ರಯತ್ನಿಸುತ್ತಿದ್ದಾನೆ. ನನ್ನ ಮಗನಿಗೆ ಈಗ 19 ವರ್ಷವಾಗಿದ್ದು ಈ ಮದುವೆ ಕಾನೂನು ಬಾಹಿರವಾಗುತ್ತದೆ. ಇದರಿಂದ ತನ್ನ ಅಪ್ರಾಪ್ತ ಮಗನ ಮದುವೆ ನಿಲ್ಲಿಸಿ, ಆತನನ್ನು ಬಲವಂತವಾಗಿ ಮತಾಂತರ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ತಂದೆ ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರು ಒತ್ತಾಯಿಸಿದ್ದು, ಈ ಸಂಬಂಧ ಪಾಂಡವಪುರ ಪೊಲೀಸರಿಗೆ ದೂರು ನೀಡಿದ್ದಾರೆ.

ಪಟ್ಟಣದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು ಸ್ಥಳಕ್ಕೆ ಹೆಚ್ಚಿನ ಬಂದೋಬಸ್ತ್ ಏರ್ಪಡಿಸಲಾಗಿದೆ.