ಇಲ್ಲೊಂದು ವೈದ್ಯಕೀಯ ಸಂಶೋಧಕರ ತಂಡ ಉಪವಾಸ ಮಾಡುವುದರಿಂದ ದೊಡ್ಡ ಗಂಡಾಂತರದಿಂದ ಪಾರಾಗಲಿದ್ದೀರಿ ಎಂದು ವರದಿ ನೀಡಿದೆ.

ಉಪವಾಸ ವ್ರತ ಮಾಡುವುದರಿಂದ ಆರೋಗ್ಯಕ್ಕೆ ಒಳ್ಳೆಯದಂದು ಹಿರಿಯರು ಹೇಳಿರುವುದು ಸುಳ್ಳಲ್ಲ. ವ್ಯದ್ಯಲೋಕವು ಸಹ ಆಗಾಗ ಉಪವಾಸ ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಸಲಹೆಯನ್ನು ನೀಡುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಲ್ಲೊಂದು ವೈದ್ಯಕೀಯ ಸಂಶೋಧಕರ ತಂಡ ಉಪವಾಸ ಮಾಡುವುದರಿಂದ ದೊಡ್ಡ ಗಂಡಾಂತರದಿಂದ ಪಾರಾಗಲಿದ್ದೀರಿ ಎಂದು ವರದಿ ನೀಡಿದೆ. ಆಗಾಗ ಉಪವಾಸ ಮಾಡುವುದರಿಂದ ಕ್ಯಾನ್ಸರ್ ರೋಗಾಣುಗಳು ನಿಮ್ಮ ದೇಹದಿಂದ ದೂರವಾಗುತ್ತದೆ. ಅದಲ್ಲದೆ ರಕ್ತ ಕ್ಯಾನ್ಸರ್'ನಂಥ ಕಾಯಿಲೆಗಳು ನಿಮ್ಮ ಹತ್ತಿರ ಸುಳಿಯುವುದಿಲ್ಲ ಎಂದು ಸಂಶೋಧಕರು ಅಭಿಪ್ರಾಯ ಮಂಡಿಸಿದ್ದಾರೆ.

ಅಮೆರಿಕಾದ ಟೆಕ್ಸಾಸ್ ನೈರುತ್ಯ ವೈದ್ಯಕೀಯ ಕೇಂದ್ರ ವಿಶ್ವವಿದ್ಯಾಲಯ ಈ ಸಂಶೋಧನೆ ನಡೆಸಿದ್ದು ಸಾಮಾನ್ಯವಾಗಿ ಬಾಲ್ಯದಿಂದಲೇ ಕಾಣಿಸಿಕೊಳ್ಳುವ ರಕ್ತ ಕ್ಯಾನ್ಸರ್'ನ ಕಣಗಳನ್ನು ಉಪವಾಸ ಮಾಡುವ ಪರಿಣಾಮದಿಂದ ತಡೆಯುತ್ತದೆ' ಎಂದು ತಿಳಿಸಿದೆ.