ಮಂಡ್ಯ : ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು,  ಚುನಾವಣೆ ಘೋಷಣೆಗೂ ಮುನ್ನವೇ ರೈತರು ಮತದಾನ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ. 

ಮಂಡ್ಯ ಜಿಲ್ಲೆ, ಮದ್ದೂರು ಪಟ್ಟಣದಲ್ಲಿ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಮನೆಗೆ ಮುತ್ತಿಗೆ ಹಾಕಿದ ರೈತರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ ರವಾನೆಯಾಗಿದೆ. 

ಮದ್ದೂರು ತಾಲ್ಲೂಕಿನ ಕಡೇ ಭಾಗಕ್ಕೆ  ವ್ಯವಸಾಯಕ್ಕೆ ನೀರು ಹರಿಸದ ಹಿನ್ನೆಲೆಯಲ್ಲಿ ಅಜ್ಜಹಳ್ಳಿ, ಮಾರ್ಗೇನಹಳ್ಳಿ, ಉಪ್ಪಾರದೊಡ್ಡಿ ಗ್ರಾಮಸ್ಥರು ಸಚಿವರ ಮನೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ನಮ್ಮ‌ ಭಾಗದ ಜಮೀನಿಗೆ ವ್ಯವಸಾಯಕ್ಕೆ ನೀರಿಲ್ಲ. ಹೀಗಿರುವಾಗ ನಮಗೆ ಚುನಾವಣೆ ಯಾಕೆ ಬೇಕು. ಮತ ಪೆಟ್ಟಿಗೆ ನಮ್ಮ ಊರಿಗೆ ಬರಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.