ಬೆಳೆ ಕಟಾವಿಗೆ ನಕಾರ : ದಲಿತ ರೈತನಿಗೆ ಮೂತ್ರ ಕುಡಿಸಿ ದೌರ್ಜನ್ಯ

Farmer Harassment In Uttar Pradesh
Highlights

ಬೆಳೆ ಕಟಾವು ಮಾಡಲು ತಿರಸ್ಕರಿಸಿದ್ದಾರೆ ಎಂಬ ಕಾರಣಕ್ಕಾಗಿ ಮೇಲ್ವರ್ಗದ ಗುಂಪೊಂದು ದಲಿತ ಕುಟುಂಬದ ವ್ಯಕ್ತಿಗೆ ಬಲವಂತವಾಗಿ ಮೂತ್ರ ಕುಡಿಸಿದ ಆಘಾತಕಾರಿ ಮತ್ತು ಅಮಾನವೀಯ ಘಟನೆ ಉತ್ತರ ಪ್ರದೇಶ ದಲ್ಲಿ ನಡೆದಿದೆ.

ಬದೌನ್(ಉತ್ತರ ಪ್ರದೇಶ): ಬೆಳೆ ಕಟಾವು ಮಾಡಲು ತಿರಸ್ಕರಿಸಿದ್ದಾರೆ ಎಂಬ ಕಾರಣಕ್ಕಾಗಿ ಮೇಲ್ವರ್ಗದ ಗುಂಪೊಂದು ದಲಿತ ಕುಟುಂಬದ ವ್ಯಕ್ತಿಗೆ ಬಲವಂತವಾಗಿ ಮೂತ್ರ ಕುಡಿಸಿದ ಆಘಾತಕಾರಿ ಮತ್ತು ಅಮಾನವೀಯ ಘಟನೆ ಉತ್ತರ ಪ್ರದೇಶ ದಲ್ಲಿ ನಡೆದಿದೆ.

ರೈತ ಸೀತಾರಾಮ್ ವಾಲ್ಮೀಕಿ ಮೇಲ್ಜಾತಿ ವ್ಯಕ್ತಿಗಳಿಂದ ದೌರ್ಜನ್ಯಕ್ಕೊಳಗಾದ ವ್ಯಕ್ತಿ. ಮೇಲ್ವರ್ಗದ ರೈತರು, ಮೊದಲಿಗೆ ತಮ್ಮ ಬೆಳೆಗಳ ಕಟಾವು ಮುಗಿಸಿಕೊಡಲು ಪಟ್ಟು ಹಿಡಿದಿದ್ದರು. ಆದರೆ, ಇದಕ್ಕೆ ದಲಿತ ರೈತ ನಿರಾಕರಿಸಿದ್ದರು.


ಇಷ್ಟಕ್ಕೆ ದಲಿತ ರೈತನಿಗೆ ಚಪ್ಪಲಿಗಳಿಂದ ಥಳಿಸಿ, ಬಳಿಕ ಮರಕ್ಕೆ ಕಟ್ಟಿ ಹಾಕಿ ಮೂಗು ಹಿಡಿದು ಮೂತ್ರ ಕುಡಿಸಿದ್ದಾರೆ ಎಂದು ಹೇಳಲಾಗಿದೆ.

loader