ಸಾಲಮನ್ನಾದ ನಿರೀಕ್ಷೆಯಲ್ಲಿದ್ದ ರೈತ ನೊಂದು ಆತ್ಮಹತ್ಯೆ

First Published 6, Jul 2018, 12:06 PM IST
Farmer ends life in Chamarajanagar
Highlights

ಸಾಲಮನ್ನಾದ ನಿರೀಕ್ಷೆಯಲ್ಲಿದ್ದ ರೈತನೋರ್ವ  ತಾನು ಪಡೆದಿದ್ದ ಸಾಲಮನ್ನಾವಾಗದಿದ್ದಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರದ ಕುದೇರು ಠಾಣಾ ವ್ಯಾಪ್ತಿಯ ದೇಮನಹಳ್ಳಿಯಲ್ಲಿ ನಡೆದಿದೆ.
 

ಚಾಮರಾಜನಗರ: ಸಾಲಮನ್ನಾದ ನಿರೀಕ್ಷೆಯಲ್ಲಿದ್ದ ರೈತನೋರ್ವ  ತಾನು ಪಡೆದಿದ್ದ ಸಾಲಮನ್ನಾವಾಗದಿದ್ದಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುದೇರು ಠಾಣಾ ವ್ಯಾಪ್ತಿಯ ದೇಮನಹಳ್ಳಿಯಲ್ಲಿ ನಡೆದಿದೆ.

ಚಿಕ್ಕಸ್ವಾಮಿ(45) ಎಂಬ ರೈತ ಕಳೆದ ಫೆಬ್ರವರಿಯಲ್ಲಿ  ಸಹಕಾರ ಸಂಘದಿಂದ 40 ಸಾವಿರ ರೂ. ಸಾಲ ಪಡೆದಿದ್ದರು ಎನ್ನಲಾಗಿದ್ದು, ಸಾಲಮನ್ನಾದ ಕುರಿತು ಬಹು ನಿರೀಕ್ಷೆ ಇಟ್ಟುಕೊಂಡಿದ್ದರು. 

ಕಳೆದ 8  ತಿಂಗಳಿನ ಹಿಂದೆ ಆಪರೇಷನ್ ಗಾಗಿ 70 ಸಾವಿರ, ಮಗುವಿನ ಚಿಕಿತ್ಸೆಗಾಗಿ 1 ಲಕ್ಷ ಖಾಸಗಿಯಾಗಿ ಸಾಲ ಮಾಡಿದ್ದ ಚಿಕ್ಕಸ್ವಾಮಿ ಅವರು ಸಾಲಕ್ಕೆ ಬೇಸತ್ತು ರಾತ್ರಿ 1 ರ ವೇಳೆಯಲ್ಲಿ ನೇಣು ಹಾಕಿಕೊಂಡಿದ್ದಾರೆ.
 
ನೇಣು ಹಾಕಿಕೊಂಡ ವಿಚಾರ ತಿಳಿಯುತ್ತಿದ್ದಂತೆ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ  ಮೃತಪಟ್ಟಿದ್ದಾರೆ.

loader