ಸಾಲಭಾಧೆ ತಾಳಲಾರದೆ ರೈತ ನೇಣಿಗೆ ಶರಣು

First Published 20, Jul 2018, 9:29 AM IST
Farmer commit to Suicide in Bidar
Highlights

ಸಾಲ ಮನ್ನಾ ಆದರೂ ರೈತರ ಆತ್ಮಹತ್ಯೆ  ನಿಂತಿಲ್ಲ. ಬೀದರ್’ನಲ್ಲಿ ರೈತರ ಸರಣಿ ಆತ್ಮಹತ್ಯೆ ಮುಂದುವರೆದಿದೆ. ಸಚಿವರು, ಶಾಸಕರು ಸೌಜನ್ಯಕ್ಕೂ ಮೃತ ರೈತರ ಮನೆಗೆ ಭೇಟಿ ಕೊಟ್ಟಿಲ್ಲ. ಇವರ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. 

ಬೀದರ್ (ಜು. 20):  ಸಾಲ ಮನ್ನಾ ಆದರೂ ರೈತರ ಆತ್ಮಹತ್ಯೆ  ನಿಂತಿಲ್ಲ. ಬೀದರ್’ನಲ್ಲಿ ರೈತರ ಸರಣಿ ಆತ್ಮಹತ್ಯೆ ಮುಂದುವರೆದಿದೆ. 

ಬೀದರ್ ಒಂದೇ ಜಿಲ್ಲೆಯಲ್ಲಿ 5 ಜನ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಇಂದು ಬೀದರ್ ಜಿಲ್ಲೆಯಲ್ಲಿ ಮತ್ತೊಬ್ಬ ರೈತ  ಸಾಲಬಾಧೆ ತಾಳಲಾರದೆ ನೇಣಿಗೆ ಶರಣಾಗಿದ್ದಾರೆ.  ಬಸವಕಲ್ಯಾಣ ತಾಲೂಕಿನ ಹಳ್ಳಿ ಗ್ರಾಮದ ರೈತ ಬಾಲಾಜಿ ಆತ್ಮಹತ್ಯೆ ಮಾಡಿಕೊಂಡ ರೈತ. ಸಾಲ ಮನ್ನಾ ಬಳಿಕ ಇಲ್ಲಿಯವರೆಗೆ ಐವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಸೌಜನ್ಯಕಾದರೂ ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಮನೆಗೆ ಇದುವರೆಗೂ ಸಚಿವರು ಮತ್ತು ಶಾಸಕರು ಭೇಟಿ ಕೊಟ್ಟಿಲ್ಲ.  

loader