ಬೆಂಗಳೂರು(ಆ.07): ಕಳೆದ 9 ದಿನಗಳಿಂದ ಬೆಂಗಳೂರಿನ ಖಾಸಗಿ ರೆಸಾರ್ಟ್‌ನಲ್ಲಿ ಬೀಡುಬಿಟ್ಟಿದ್ದ ಗುಜರಾತ್‌ನ ಕಾಂಗ್ರೆಸ್ ಶಾಸಕರು ತಡರಾತ್ರಿ ಗುಜರಾತ್‌ಗೆ ವಾಪಸ್ ಆಗಿದ್ದಾರೆ.

ಇದಕ್ಕೂ ಮುನ್ನ ರೆಸಾರ್ಟ್‌'ನಲ್ಲಿ ಅವರಿಗೆ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು. ಇದೇ ವೇಳೆ ರೆಸಾರ್ಟ್‌'ನಲ್ಲಿ ಅಣ್ಣ-ತಂಗಿಯ ಭಾಂದವ್ಯ ಅನಾವರಣವಾಯ್ತು. ಇಂದು ರಕ್ಷಾಬಂಧನವಾಗಿರುವುದರಿಂದ ಗುಜರಾತ್‌ನ ಮಹಿಳೆಯೊಬ್ಬರು ಡಿ.ಕೆ.ಶಿವಕುಮಾರ್‌ ಅವರಿಗೆ ರಾಖಿ ಕಟ್ಟುವ ಮೂಲಕ ಅಣ್ಣ -ತಂಗಿಯ ಭಾಂದವ್ಯಕ್ಕೆ ಸಾಕ್ಷಿಯಾದ್ರು.

ಕೇವಲ ಡಿ.ಕೆ.ಶಿವಕುಮಾರ್‌ಗೆ ಮಾತ್ರವಲ್ಲ. ಸಂಸದ ಡಿ.ಕೆ.ಸುರೇಶ್‌ಗೂ ರಾಖಿ ಕಟ್ಟುವ ಮೂಲಕ ಅಣ್ಣ-ತಂಗಿಯ ಭಾಂದವ್ಯ ತೋರಿದ್ರು.