ಬೆಂಗಳೂರು :  ಫೋನಿ ಚಂಡಮಾರುತದ ಅರ್ಭಟ ತೀವ್ರ ಸ್ವರೂಪ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಒಡಿಶಾ ಮತ್ತು ಪಶ್ಚಿಮ ಬಂಗಾಳಕ್ಕೆ ಹೋಗಬೇಕಿದ್ದ ಆರು ರೈಲುಗಳ ಸಂಚಾರವನ್ನು ನೈಋುತ್ಯ ರೈಲ್ವೆ ಸ್ಥಗಿತಗೊಳಿಸಿದೆ. 

ಮೇ 6ರಂದು ಹೊರಡಬೇಕಿದ್ದ ಮೈಸೂರು-ಹೌರಾ ಎಕ್ಸ್‌ಪ್ರೆಸ್‌ ರೈಲು (ರೈಲು ಸಂಖ್ಯೆ 22818), ಮೇ 4ರ ಯಶವಂತಪುರ-ಪುರಿ ಎಕ್ಸ್‌ಪ್ರೆಸ್‌ ರೈಲು (ರೈಲು 22884 ಸಂಖ್ಯೆ), ಮೇ 4ರಂದು ಹೌರಾದಿಂದ ಹೊರಡಬೇಕಿದ್ದ ಹೌರಾ-ಯಶವಂತಪುರ ಎಕ್ಸ್‌ಪ್ರೆಸ್‌ ರೈಲು (ರೈಲು ಸಂಖ್ಯೆ 12863), ಹೌರಾ-ಯಶವಂತಪುರ ಎಕ್ಸ್‌ಪ್ರೆಸ್‌ ರೈಲು (ರೈಲು ಸಂಖ್ಯೆ 12864), ಹೌರಾ-ವಾಸ್ಕೊ ಡಾ-ಗಾಮ ರೈಲು (ರೈಲು ಸಂಖ್ಯೆ 12863) ಹಾಗೂ ಮೇ 4ರಂದು ಭುವನೇಶ್ವರದಿಂದ ಹೊರಡಬೇಕಿದ್ದ ಭುವನೇಶ್ವರ-ಕೆಎಸ್‌ಆರ್‌ ಬೆಂಗಳೂರು ಎಕ್ಸ್‌ಪ್ರೆಸ್‌ ರೈಲು (ರೈಲು ಸಂಖ್ಯೆ 18463) ಸಂಚಾರವನ್ನು ರದ್ದುಗೊಳಿಸಿದೆ.

ಈಗಾಗಲೇ ಫನಿ ಅಬ್ಬರ ಹೆಚ್ಚಾಗಿದ್ದು, ಒಡಿಶಾದಲ್ಲಿ ಸೂಕ್ತ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.