Asianet Suvarna News Asianet Suvarna News

ಅಪ್ಪ-ಮಗ, ಅಪ್ಪ-ಮಗ, ಗಂಡ-ಹೆಂಡತಿ...ಸದ್ಯದ ಸ್ಥಿತಿ!

ಕುತೂಹಲ ಕೆರಳಿಸಿದ್ದ ಕರ್ನಾಟಕದ 3 ಲೋಕಸಭೆ ಮತ್ತು 2 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ ಒಂದು ಕ್ಷೇತ್ರದಲ್ಲಿ ಜಯಗಳಿಸಿದರೆ, ಉಳಿದ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್‌-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳು ಗೆದ್ದಿದ್ದಾರೆ. ಆದರೆ ಇಲ್ಲಿಯೂ ಮತ್ತೆ ಕುಟುಂಬ ರಾಜಕಾರಣವೇ ಮುಂಚೂಣಿಯಲ್ಲಿರುವುದನ್ನು ಒಪ್ಪಿಕೊಳ್ಳಲೇಬೇಕು.

family politics gains Upper hand in Karnataka By Elections 2018
Author
Bengaluru, First Published Nov 6, 2018, 6:36 PM IST

ಬೆಂಗಳೂರು[ನ.06] ಉಪಚುನಾವಣೆ ಫಲಿತಾಂಶ ಹೊರಬಂದಿದ್ದು ರಾಜಕೀಯ ಪಕ್ಷಗಳು ಸೋಲು ಗೆಲುವಿನ ಲೆಕ್ಕಾಚಾರ ಹಾಕುತ್ತಿವೆ. ಯಾರಿಗೆ ನಷ್ಟ-ಯಾರಿಗೆ ಲಾಭ ಚರ್ಚೆ ಆರಂಭವಾಗಿದೆ.

ಪದೇ ಪದೇ ಕೇಳಿಬರುತ್ತಿರುವ ಕುಟುಂಬ ರಾಜಕಾರಣಕ್ಕೆ ಈ ಚುನಾವಣೆಯೂ ಹೊರತಾಗಿಲಲ್ಲ. ಜನರು ಸಹ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿದ್ದಾರೆಯೇ?  ಬಹುತೇಕ ಸತ್ಯ ಎಂದೇ ಭಾವಿಸಬೇಕಾಗಿದೆ.

ಬೈ ಎಲೆಕ್ಷನ್ ಕಂಪ್ಲೀಟ್ ಡಿಟೇಲ್ಸ್

ಶಿವಮೊಗ್ಗದಲ್ಲಿ ಬಿಎಸ್ ಯಡಿಯೂರಪ್ಪ ರಾಜೀನಾಮೆಯಿಂದ ಸ್ಥಾನ ತೆರವಾಗಿತ್ತು. ಇದೀಗ ಅಲ್ಲಿ ಅವರ ಪುತ್ರ ಬಿ ವೈ ರಾಘವೇಂದ್ರ ಗೆಲುವು ದಾಖಲಿಸಿದ್ದಾರೆ.

ಜಮಖಂಡಿಯಲ್ಲಿ ಸಿದ್ದು ನ್ಯಾಮಗೌಡ ನಿಧನದಿಂದ ಚುನಾವಣೆ ನಡೆದಿತ್ತು. ಅಲ್ಲಿ ಅವರ ಪುತ್ರ ಆನಂದ ನ್ಯಾಮಗೌಡ ಜಯಭೇರಿ ಬಾರಿಸಿದ್ದಾರೆ.

ಇನ್ನು ರಾಮನಗರದಲ್ಲಿ ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾದ ಸ್ಥಾನದಲ್ಲಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಶಾಸಕಿಯಾಗಿ ವಿಧಾನಸಭೆ ಪ್ರವೇಶ ಮಾಡಿದ್ದಾರೆ.

ಬಳ್ಳಾರಿಯಲ್ಲಿಯೂ ಸಹ ಶ್ರೀರಾಮುಲು ಸಹೋದರಿ ಶಾಂತಾ ಸ್ಪರ್ಧೆ ಮಾಡಿ ಸೋಲು ಕಂಡರು. ಇದ್ದುದರಲ್ಲಿ ಮಂಡ್ಯ ಕ್ಷೇತ್ರ ಮಾಥ್ರ ಕುಟುಂಬ ರಾಜಕಾರಣದಿಂದ ಹೊರತಾಗಿತ್ತು.

Follow Us:
Download App:
  • android
  • ios