Asianet Suvarna News Asianet Suvarna News

ದುನಿಯಾ ವಿಜಿ ವಿರುದ್ಧ ಉದಯ್ ತಾಯಿ ಆಕ್ರೋಶ

"ಉದಯ್'ನನ್ನು ತಮ್ಮ ತಮ್ಮ ಎಂದು ದುನಿಯಾ ವಿಜಿ ಕರೆಯುತ್ತಿದ್ದ. ಈಗ ತಮ್ಮನನ್ನೇ ನೀರಿಗೆ ತಳ್ಳಿದ್ದಾನೆ.." ಎಂದು ಉದಯ್ ತಾಯಿ ಆಕ್ರೋಶ ವ್ಯಕ್ತಪಡಿಸಿದರು.

family of raghav uday anguish against mastigudi team
  • Facebook
  • Twitter
  • Whatsapp

ಬೆಂಗಳೂರು(ಜ. 08): ಮಾಸ್ತಿಗುಡಿ ಶೂಟಿಂಗ್ ವೇಳೆ ದುರುಂತ ಸಾವನ್ನಪ್ಪಿದ ಇಬ್ಬರು ನಟರ ಕುಟುಂಬಗಳಲ್ಲಿ ದುಃಖ ಮಡುಗಟ್ಟಿದೆ. ಅವರಿಬ್ಬರು ಸಾವನ್ನಪಿದ್ದರೂ ಚಿತ್ರತಂಡದ ಯಾವೊಬ್ಬರೂ ಕೂಡ ಅವರ ಕುಟುಂಬಗಳಿಗೆ ಭೇಟಿ ನೀಡುವ ಸೌಜನ್ಯ ತೋರಿಲ್ಲ. ತನ್ನ ಮಗನಿಗೆ ಸಹೋದರನಂತಿದ್ದ ದುನಿಯಾ ವಿಜಿ ಕೂಡ ಮನೆಗೆ ಬಂದು ಮಾತನಾಡಿಲ್ಲ ಎಂದು ರಾಘವ್ ಉದಯ್'ನ ತಾಯಿ ಕೌಸಲ್ಯ ಬೇಸರಪಟ್ಟುಕೊಂಡರು.

"ಉದಯ್'ನನ್ನು ತಮ್ಮ ತಮ್ಮ ಎಂದು ದುನಿಯಾ ವಿಜಿ ಕರೆಯುತ್ತಿದ್ದ. ಈಗ ತಮ್ಮನನ್ನೇ ನೀರಿಗೆ ತಳ್ಳಿ ಅವ ಬದುಕಿ ಬಂದಿದ್ದಾನೆ" ಎಂದು ಉದಯ್ ತಾಯಿ ಆಕ್ರೋಶ ವ್ಯಕ್ತಪಡಿಸಿದರು.

ಸುವರ್ಣನ್ಯೂಸ್ ಜೊತೆ ಮಾತನಾಡಿದ ಉದಯ್ ತಾಯಿ ಕೌಸಲ್ಯ, ತನ್ನ ಮಗನಿಗೆ ಈಜು ಬರುತ್ತಿರಲಿಲ್ಲ, ತಲೆಗೆ ಪೆಟ್ಟೂ ಬಿದ್ದಿತ್ತು. ಆದರೂ ಬಲವಂತವಾಗಿ ನೀರಿಗೆ ತಳ್ಳಿದ್ದಾರೆ ಎಂದು ಆರೋಪಿಸಿದರು.

ಮಾಸ್ತಿಗುಡಿ ಚಿತ್ರತಂಡದವರಿಗೆ ಮಾನವೀಯತೆ ಇಲ್ಲ ಎಂದು ಉದಯ್'ನ ಚಿಕ್ಕಪ್ಪ ಶ್ರೀನಿವಾಸ್ ಕಿಡಿಕಾರಿದರು. ಉದಯ್ ಬಹುಪಾಲು ಸಮಯ ದುನಿಯಾ ವಿಜಿ ಜೊತೆಯೇ ಇರುತ್ತಿದ್ದವ. ಆದರೂ ವಿಜಿ ಬಂದು ಇಲ್ಲಿ ಮಾತನಾಡಿಸುವ ಗೋಜಿಗೆ ಹೋಗಿಲ್ಲ ಎಂದು ಶ್ರೀನಿವಾಸ್ ಅಸಮಾಧಾನ ವ್ಯಕ್ತಪಡಿಸಿದರು.

ಅತ್ತ ದುನಿಯಾ ವಿಜಿ ಅವರು ತಿಪ್ಪಗೊಂಡನಹಳ್ಳಿಯಲ್ಲಿ ರಾಘವ ಉದಯ್ ಮತ್ತು ಅನಿಲ್ ಅವರ ಮೃತ ದೇಹಗಳ ಶೋಧ ಕಾರ್ಯಾಚರಣೆಯ ಸ್ಥಳದಲ್ಲಿದ್ದಾರೆನ್ನಲಾಗಿದೆ. ಮಾಧ್ಯಮಗಳೊಂದಿಗೆ ಮಾತನಾಡಲು ವಿಜಿ ನಿರಾಕರಿಸುತ್ತಿರುವುದು ವರದಿಯಾಗಿದೆ.

Follow Us:
Download App:
  • android
  • ios