ಚಿತ್ರೀಕರಣದ ವೇಳೆ  ಅರ್ಜುನ್ ಸರ್ಜಾ ಅಸಭ್ಯ ವರ್ತನೆ: ಶೃತಿ ಆರೋಪ ನನ್ನ ಅಳಿಯ ದೇವರಂತಾ ಮನುಷ್ಯ : ಅತ್ತೆ ಪಾರ್ವತಮ್ಮ

ಬೆಂಗಳೂರು: ಸ್ಯಾಂಡಲ್‌ವುಡ್ ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ಅಸಭ್ಯ ವರ್ತನೆ ಆರೋಪ ಮಾಡಿರುವ ಬೆನ್ನಲ್ಲೇ, ನಟನ ಕುಟುಂಬಸ್ಥರು ಆರೋಪವನ್ನು ಅಲ್ಲಗಳೆದಿದ್ದಾರೆ.

ನನ್ನ ಅಳಿಯ ಅಂಥವರಲ್ಲ, ದೇವರಂತಾ ಮನುಷ್ಯ ಎಂದು ಅತ್ತೆ ಪಾರ್ವತಮ್ಮ ಹೇಳಿದ್ದಾರೆ. ಘಟನೆ ನಡೆದ ದಿನ ಹೇಳದೇ ಈಗ ಯಾಕೆ ಆರೋಪ ಮಾಡುತ್ತಿದ್ದಾರೆ..? ಈ ರೀತಿಯ ಆರೋಪದಿಂದ ನಮ್ಮ ಕುಟುಂಬದವರಿಗೆ ಘಾಸಿಯಾಗಿದೆ, ಎಂದು ಶೃತಿ ಹರಿಹರನ್ ವಿರುದ್ಧ ಕಿಡಿಕಾರಿದ್ದಾರೆ.

"

ಶೃತಿ ಹರಿಹರನ್ ವಿರುದ್ಧ ಮಾನನಷ್ಟ ಮೊಕದ್ದಮೆಗೆ ಕುಟುಂಬಸ್ಥರು ಚಿಂತನೆ ನಡೆಸಿದ್ದಾರೆ. 

"

ತಮಗೆ ಪದೇ ಪದೇ ಡಿನ್ನರ್‌ಗೆ ಹೋಗೋಣ ಎಂದು ನಟ ಅರ್ಜುನ್ ಸರ್ಜಾ ಪೀಡಿಸುತ್ತಿದ್ದರು ಎಂದು ಮ್ಯಾಗಜಿನ್ ಒಂದಕ್ಕೆ ನಟಿ ಶೃತಿ ಹರಿಹರನ್ ಹೇಳಿದ್ದಾರೆ.

ಶೃತಿ ಬರುವುದಿಲ್ಲ ಎಂದರೂ ಕೂಡ ಪದೇ ಪದೇ ಪೀಡಿಸುತ್ತಿದ್ದರು ಎನ್ನಲಾಗಿದ್ದು, ವಿಸ್ಮಯ ಚಿತ್ರದ ವೇಳೆ ಅಸಭ್ಯವಾಗಿ ವರ್ತಿಸಿದ್ದರು ಎಂದು ಹೇಳಿದ್ದಾರೆ. 

ಪತಿ - ಪತ್ನಿ ಪಾತ್ರದಲ್ಲಿ ಅಭಿನಯಿಸಿದರೆ ಗಡಿರೇಖೆ ಇರುತ್ತದೆ. ಆದರೆ ಅರ್ಜುನ್ ಸರ್ಜಾ ಆ ಗಡಿ ರೇಖೆಯನ್ನು ಸರ್ಜಾ ಮೀರಿದ್ದರು ಎಂದು ಶೃತಿ ಹೇಳಿದ್ದಾರೆ.