[ಸುಳ್ಳು ಸುದ್ದಿ] ದೇಶದ ಅತೀ ಹೆಚ್ಚು ದೇವಾಲಯಗಳಿಗೆ ಭೇಟಿ : ರಾಹುಲ್ ದಾಖಲೆ

First Published 25, Mar 2018, 10:40 AM IST
Faking News Rahul New Record
Highlights

ಚುನಾವಣಾ ಪ್ರಚಾರದ ವೇಳೆ ದೇವಾಲಯಗಳಿಗೆ ಭೇಟಿ ನೀಡುತ್ತಿರುವ ರಾಹುಲ್ ಗಾಂಧಿ ದೇಶದಲ್ಲಿ ಅತಿ ಹೆಚ್ಚು ದೇವಾಲಯಗಳಿಗೆ ಭೇಟಿ ನೀಡಿದ ದಾಖಲೆ ನಿರ್ಮಿಸಿದ್ದಾರೆ. ರಾಹುಲ್ ಗಾಂಧಿ ಅವರು ಚುನಾವಣೆ ಮುಗಿಯುವ ವರೆಗೆ ಕರ್ನಾಟಕದ ಎಲ್ಲಾ ದೇವಾಲಯಗಳಿಗೆ ಭೇಟಿ ನೀಡುವ ಗುರಿಯನ್ನು ಇಟ್ಟುಕೊಂಡಿದ್ದಾರೆ.

ಬೆಂಗಳೂರು : ಚುನಾವಣಾ ಪ್ರಚಾರದ ವೇಳೆ ದೇವಾಲಯಗಳಿಗೆ ಭೇಟಿ ನೀಡುತ್ತಿರುವ ರಾಹುಲ್ ಗಾಂಧಿ ದೇಶದಲ್ಲಿ ಅತಿ ಹೆಚ್ಚು ದೇವಾಲಯಗಳಿಗೆ ಭೇಟಿ ನೀಡಿದ ದಾಖಲೆ ನಿರ್ಮಿಸಿದ್ದಾರೆ. ರಾಹುಲ್ ಗಾಂಧಿ ಅವರು ಚುನಾವಣೆ ಮುಗಿಯುವ ವರೆಗೆ ಕರ್ನಾಟಕದ ಎಲ್ಲಾ ದೇವಾಲಯಗಳಿಗೆ ಭೇಟಿ ನೀಡುವ ಗುರಿಯನ್ನು ಇಟ್ಟುಕೊಂಡಿದ್ದಾರೆ.

ಹೀಗಾಗಿ ಪ್ರತಿ ತಾಲೂಕು ಮತ್ತು  ಗ್ರಾಮಗಳಲ್ಲಿರುವ ಪ್ರಸಿದ್ಧ ದೇವಾಲಯಗಳ ಪಟ್ಟಿಯನ್ನು ರಾಹುಲ್‌ಗೆ ನೀಡಲಾಗಿದೆ. ದೇವಾಲಯಗಳ ಭೇಟಿಯಲ್ಲಿ ರಾಹುಲ್, ಪ್ರಧಾನಿ ಮೋದಿ ಅವರನ್ನು ಒಂದೇ ವರ್ಷದಲ್ಲಿ ಹಿಂದಿಕ್ಕಿದ್ದಾರೆ. ಇದುವರೆಗೆ ರಾಹುಲ್ ಭೇಟಿ ನೀಡಿದ ದೇವಾಲಯಗಳ ಸಂಖ್ಯೆ 1000 ದಾಟಿದೆ.

ಮೋದಿ ಅವರ ದೇವಾಲಯ ಭೇಟಿ 500ನ್ನೂ ದಾಟಿಲ್ಲ ಎಂದು ಸುಳ್ ಸುದ್ದಿ ಮೂಲಗಳು ತಿಳಿಸಿವೆ. [ಸುಳ್ಳು ಸುದ್ದಿ]

loader