ವಿದೇಶದಿಂದ ತರಿಸಿಕೊಳ್ಳುತ್ತಿರುವ ಪೆಟ್ರೋಲ್ ದಿನೇ ದಿನೇ ಏರುತ್ತಿರುವುದರಿಂದ ಕಡಿಮೆ ಬೆಲೆಯಲ್ಲಿ ಪೆಟ್ರೋಲ್ ನೀಡುವ ಸಲುವಾಗಿ ಬಾಬಾ ರಾಮ್ ದೇವ್ ಅವರು ಪತಂಜಲಿ ಸಂಸ್ಥೆಯಿಂದ ಅಗ್ಗದ ದರದ ಸಾವಯವ ಪೆಟ್ರೋಲ್ ಪರಿಚಯಿಸಿದ್ದಾರೆ.

[ಸುಳ್‌ಸುದ್ದಿ ವಾರ್ತೆ] 

ವಿದೇಶದಿಂದ ತರಿಸಿಕೊಳ್ಳುತ್ತಿರುವ ಪೆಟ್ರೋಲ್ ದಿನೇ ದಿನೇ ಏರುತ್ತಿರುವುದರಿಂದ ಕಡಿಮೆ ಬೆಲೆಯಲ್ಲಿ ಪೆಟ್ರೋಲ್ ನೀಡುವ ಸಲುವಾಗಿ ಬಾಬಾ ರಾಮ್ ದೇವ್ ಅವರು ಪತಂಜಲಿ ಸಂಸ್ಥೆಯಿಂದ ಅಗ್ಗದ ದರದ ಸಾವಯವ ಪೆಟ್ರೋಲ್ ಪರಿಚಯಿಸಿದ್ದಾರೆ.

ಈ ಪೆಟ್ರೋಲ್‌ನ ಬೆಲೆ ಲೀಟರ್‌ಗೆ 50 ರು. ಆಗಿದೆ. ಇದರ ವಿತರಣೆಗೆ ದೇಶದೆಲ್ಲೆಡೆ ಪತಂಜಲಿ ಪೆಟ್ರೋಲ್ ಪಂಪ್’ಗಳನ್ನು ಆರಂಭಿಸಲಾಗುತ್ತದೆ. ಜನರು ಸಾವಯವ ಪತಂಜಲಿ ಪೆಟ್ರೋಲ್‌ನಿಂದ ಯಾವುದೇ ಹೊಗೆ ಬರುವುದಿಲ್ಲ.

ಚುನಾವಣೆವರೆಗೆ ಕೇಂದ್ರ ಸರ್ಕಾರ ಅಬಕಾರಿ ಸುಂಕ ವಿಧಿಸದೇ ಇರಲು ನಿರ್ಧರಿಸಿದೆ. ಹೀಗಾಗಿ ಎಲ್ಲಾ ರಾಜ್ಯಗಳಲ್ಲೂ ಪೆಟ್ರೊಲ್ ಬೆಲೆ ಏರಿಕೆಯಾಗುವ ಸಾಧ್ಯತೆ ಇಲ್ಲ. ಆದರೆ, ಪೆಟ್ರೋಲ್ ಹೇಗೆ ತಯಾರಿಸಲಾಗಿದೆ ಎಂಬ ಗುಟ್ಟನ್ನು ರಾಮ್ ದೇವ್ ಸುಳ್‌ಸುದ್ದಿ ಸಂಸ್ಥೆಗೆ ಬಿಟ್ಟುಕೊಟ್ಟಿಲ್ಲ