ತಾವು ಮಂಡಿಸಲಿರುವ ಬಜೆಟ್‌ನಲ್ಲಿ ಸಾಲ ಮನ್ನಾದ ವಿಷಯ ಬಿಟ್ಟರೆ ಬೇರೆ ಯಾವ ವಿಷಯವೂ ಇರುವುದಿಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅಭಯ ನೀಡಿದ್ದಾರೆ. 

[ಸುಳ್ಳು ಸುದ್ದಿ]
ಬೆಂಗಳೂರು
: ತಾವು ಮಂಡಿಸಲಿರುವ ಬಜೆಟ್‌ನಲ್ಲಿ ಸಾಲ ಮನ್ನಾದ ವಿಷಯ ಬಿಟ್ಟರೆ ಬೇರೆ ಯಾವ ವಿಷಯವೂ ಇರುವುದಿಲ್ಲ ಎಂದು ಕುಮಾರಸ್ವಾಮಿ ಅಭಯ ನೀಡಿದ್ದಾರೆ.

ಈ ಮೂಲಕ ಬಜೆಟ್ ಮಂಡಿಸಲು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಮುಖಂಡರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಾನು ಈಗ ರೈತರ ಸಾಲ ಮನ್ನಾ ಮಾಡಲಿದ್ದೇನೆ ಎಂದು ಹೇಳುವ ಮೂಲಕ ಬಜೆಟ್ ಆರಂಭವಾಗಲಿದ್ದು, ಸಾಲ ಮನ್ನಾ ಮಾಡಿದ್ದ 
ರಿಂದ ಸರ್ಕಾರದ ಬಳಿ ಹಣದ ಇಲ್ಲದೇ ಇರುವುದರಿಂದ ಬೇರೆಲ್ಲಾ ಯೋಜನೆಗಳನ್ನು ಮುಂದಿನ ಬಜೆಟ್‌ನಲ್ಲಿ ಮಂಡಿಸುತ್ತೇನೆ ಎಂದು ಕುಮಾರಸ್ವಾಮಿ ತಮ್ಮ ಭಾಷಣವನ್ನು ಸಮಾಪ್ತಿ ಮಾಡಲಿದ್ದಾರೆ. 

ಹೀಗಾಗಿ 15 ನಿಮಿಷದಲ್ಲೇ ಬಜೆಟ್ ಭಾಷಣ ಓದಿ ಮುಗಿಯಲಿದೆ ಎಂದು ಸುಳ್‌ಸುದ್ದಿ ಮೂಲಗಳು ತಿಳಿಸಿವೆ.