ತ್ರಿಪುರಾದಲ್ಲಿ ರಷ್ಯಾದ ಕ್ರಾಂತಿಕಾರಿ ಕಮ್ಯುನಿಸ್ಟ್ ನಾಯಕ ಲೆನಿನ್‌ನ ಪ್ರತಿಮೆಯನ್ನು ನೆಲಕ್ಕುರುಳಿಸಿದ ಬೆನ್ನಲ್ಲೇ ತಮಿಳುನಾಡಿನಲ್ಲಿ ಪೆರಿಯಾರ್ ಪ್ರತಿಮೆಯನ್ನು ಕೆಲವರು ಕೆಡವಿದ್ದಾರೆ.

ಬೆಂಗಳೂರು : ತ್ರಿಪುರಾದಲ್ಲಿ ರಷ್ಯಾದ ಕ್ರಾಂತಿಕಾರಿ ಕಮ್ಯುನಿಸ್ಟ್ ನಾಯಕ ಲೆನಿನ್‌ನ ಪ್ರತಿಮೆಯನ್ನು ನೆಲಕ್ಕುರುಳಿಸಿದ ಬೆನ್ನಲ್ಲೇ ತಮಿಳುನಾಡಿನಲ್ಲಿ ಪೆರಿಯಾರ್ ಪ್ರತಿಮೆಯನ್ನು ಕೆಲವರು ಕೆಡವಿದ್ದಾರೆ.

ಇದು ಶೀಘ್ರದಲ್ಲೇ ದೇಶಾದ್ಯಂತ ಹಬ್ಬುವ ಸಾಧ್ಯತೆಯಿದೆ. ಹೀಗಾಗಿ ದೇಶದಲ್ಲಿರುವ ಎಲ್ಲಾ ಪ್ರತಿಮೆಗಳಿಗೂ ಸಿಸಿ ಕ್ಯಾಮೆರಾ ಅಳವಡಿಸಿ, ಸೋಲಾರ್ ಬೇಲಿ ನಿರ್ಮಿಸಿ, 24/7 ಭದ್ರತೆ ಒದಗಿಸುವುದನ್ನು ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ಶೀಘ್ರದಲ್ಲೇ ಸುಗ್ರೀವಾಜ್ಞೆ ಹೊರಡಿಸಲಿದೆ.

ಹಾಗೆಯೇ, ಎಲ್ಲ ವಿವಾದಿತ ವ್ಯಕ್ತಿಗಳ ಪ್ರತಿಮೆಗೂ ಇನ್ಷೂರೆನ್ಸ್ ಮಾಡಿಸುವುದಾಗಿ ಪ್ರಕಟಿಸಿದೆ. ಪ್ರತಿಮೆಗಳನ್ನು ರಾಷ್ಟ್ರೀಯ ಸಂಪತ್ತು ಎಂದು ಘೋಷಿಸುವ ಬಗ್ಗೆಯೂ ಚಿಂತಿಸಲಾಗಿದ್ದು, ಉತ್ತರ

ಪ್ರದೇಶದಲ್ಲಿರುವ ಮಾಯಾವತಿ ಪ್ರತಿಮೆಗಳನ್ನು ಏನು ಮಾಡಬೇಕು ಎಂಬ ಪ್ರಶ್ನೆ ಬಂದಿರುವುದರಿಂದ ಸದ್ಯಕ್ಕೆ ಈ ನಿರ್ಧಾರವನ್ನು ಮುಂದೂಡಲಾಗಿದೆ. [ಸುಳ್ಳು ಸುದ್ದಿ]