ಫೋಟೋಶಾಪ್ ಮಾಡಿರುವ ಪುನೀತ್ ಟ್ವೀಟ್’ನಲ್ಲಿ, ಕೇವಲ 300 ಥಿಯೇಟರ್’ಗಳು ನಮಗೆ ಸಿಕ್ಕಿದ್ದರಿಂದ ನಾವು ಹೆಬ್ಬುಲಿಯನ್ನು ಹಿಂದಿಕ್ಕಲು ವಿಫಲರಾಗಿದ್ದೇವೆ, ಎಂದು ಬರೆಯಲಾಗಿದೆ.
ಮೊನ್ನೆ ಕಿಚ್ಚ ಸುದೀಪ್ ಹೆಸರಿನಲ್ಲಿ ನಕಲಿ ಟ್ವೀಟ್ ಸೃಷ್ಟಿಸಿದ್ದ ಡಿಜಿಟಲ್ ಕಿಡಿಗೇಡಿಗಳ ಕ್ರಮಕ್ಕೆ ಪ್ರತಿಯಾಗಿ, ಈಗ ಪುನೀತ್ ರಾಜ್’ಕುಮಾರ್ ಹೆಸರಿನಲ್ಲಿ ನಕಲಿ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಫೋಟೋಶಾಪ್ ಮಾಡಿರುವ ಪುನೀತ್ ಟ್ವೀಟ್’ನಲ್ಲಿ, ಕೇವಲ 300 ಥಿಯೇಟರ್’ಗಳು ನಮಗೆ ಸಿಕ್ಕಿದ್ದರಿಂದ ನಾವು ಹೆಬ್ಬುಲಿಯನ್ನು ಹಿಂದಿಕ್ಕಲು ವಿಫಲರಾಗಿದ್ದೇವೆ, ಎಂದು ಬರೆಯಲಾಗಿದೆ.

ಮೊನ್ನೆ ಸುದೀಪ್ ಹೆಸರಿನಲ್ಲಿ ನಕಲಿ ಟ್ವೀಟ್ ಒಂದನ್ನು ಅಭಿಮಾನಿಗಳು ಸೃಷ್ಟಿಸಿ ಫೇಸ್'ಬುಕ್'ನಲ್ಲಿ ಹರಿದಾಡುತ್ತಿತ್ತು. ಫೋಟೋಶಾಪ್ ಮೂಲಕ ಸೃಷ್ಟಿಸಿದ್ದ ಈ ಟ್ವೀಟ್'ನಲ್ಲಿ 'ಕಂಗ್ರಾಟ್ಸ್ ರಾಜಕುಮಾರ್ ಟೀಂ ಆ್ಯಂಡ್ ಮೈ ಫ್ರೆಂಡ್ ಪುನೀತ್ ರಾಜ್'ಕುಮಾರ್' ಎಂದು ಬರೆದಿದ್ದರು.
ಫೋಟೋಶಾಪ್ ಮಾಡಿ ಈ ರೀತಿ ನಕಲಿ ಟ್ವೀಟ್’ಗಳನ್ನು ಹರಿಯಬಿಡುವುದು ಅಪರಾಧವೆಂ ಸುದೀಪ್ ಹೇಳಿದ್ದರೂ ಅಭಿಮಾನಿಗಳು ಇಂತಹ ಕೃತ್ಯಗಳಿಗೆ ಕೈ ಹಾಕಿರುವುದು ವಿಪರ್ಯಾಸವೇ ಸರಿ.