Asianet Suvarna News Asianet Suvarna News

ಗಂಭೀರ ಸಂದರ್ಭಗಳಲ್ಲಿ ನಗದೇ ಇರಲು ರಾಹುಲ್‌ ಗಾಂಧಿಗೆ ತಜ್ಞರ ಟ್ರೇನಿಂಗ್‌?

ಗಂಭೀರ ಸಂದರ್ಭದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ನಗುತ್ತಿದ್ದ ಫೋಟೋಗಳು ಪಕ್ಷಕ್ಕೆ ತೀವ್ರ ಮುಜುಗರ ಉಂಟುಮಾಡಿವೆ. ಈ ನಿಟ್ಟಿನಲ್ಲಿ ನಗದೇ ಇರಲು ಅವರಿಗೆ ತರಬೇತಿಯನ್ನು ನೀಡಲಾಗುತ್ತಿದೆ.
 

Fake News  Rahul Gandhi Laughing Serious Situations
Author
Bengaluru, First Published Aug 22, 2018, 12:59 PM IST

ನವದೆಹಲಿ :  ಜಯಲಲಿತಾ ಅವರ ಅಂತಿಮ ದರ್ಶನ, ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಅವರ ತಾಯಿಯ ಅಂತಿಮ ಯಾತ್ರೆ, ಅಟಲ್‌ ಬಿಹಾರಿ ವಾಜಪೇಯಿ ಅವರ ಅಂತಿಮ ಯಾತ್ರೆ ಹಾಗೂ ಮರಣಶಯ್ಯೆಯಲ್ಲಿದ್ದ ಕರುಣಾನಿಧಿ ಅವರ ಭೇಟಿ ಮುಂತಾದ ಸಂದರ್ಭದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ನಗುತ್ತಿದ್ದ ಫೋಟೋಗಳು ಪಕ್ಷಕ್ಕೆ ತೀವ್ರ ಮುಜುಗರ ಉಂಟುಮಾಡಿವೆ. 

ರಾಹುಲ್‌ಗೆ ಸೀರಿಯಸ್‌ನೆಸ್‌ ಇಲ್ಲ ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಅವರಿಗೆ ಗಂಭೀರ ಸಂದರ್ಭದಲ್ಲಿ ಗಂಭೀರ ವಾಗಿರುವುದನ್ನು ಕಲಿಸುವುದಕ್ಕೆ ಸೋನಿಯಾ ಗಾಂಧಿ ಅವರು ಜರ್ಮನಿಯ ಪಿಆರ್‌ ಸಂಸ್ಥೆಯೊಂದನ್ನು ನೇಮಕ ಮಾಡಿದ್ದಾರೆ. ಈ ಕಂಪನಿಯವರು ರಾಹುಲ್‌ಗೆ ನಗದೇ ಇರುವುದು ಹಾಗೂ ಅಗತ್ಯ ಬಿದ್ದರೆ ಕಣ್ಣೀರು ಹಾಕುವುದನ್ನೂ ಕಲಿಸಲಿದ್ದಾರೆಂದು ಸುಳ್‌ಸುದ್ದಿ ಮೂಲಗಳು ಹೇಳಿವೆ.

Follow Us:
Download App:
  • android
  • ios