Asianet Suvarna News Asianet Suvarna News

ವೈರಲ್ ಚೆಕ್: ಇಂದಿರಾ ಗಾಂಧಿಯವರ ಜೊತೆಗಿದ್ರಾ ನರೇಂದ್ರ ಮೋದಿ?

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರೊಟ್ಟಿಗೆ ಹಾಲಿ ಪ್ರಧಾನಿ ನರೇಂದ್ರ ಮೋದಿಯೂ ಇರುವ ಕಪ್ಪುಬಿಳುಪಿನ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಸತ್ಯತೆ? 

Fake news claims that PM Modi with former PM Indira Gandhi
Author
Bengaluru, First Published May 16, 2019, 9:18 AM IST
  • Facebook
  • Twitter
  • Whatsapp

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರೊಟ್ಟಿಗೆ ಹಾಲಿ ಪ್ರಧಾನಿ ನರೇಂದ್ರ ಮೋದಿಯೂ ಇರುವ ಕಪ್ಪುಬಿಳುಪಿನ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಈ ಫೋಟೋದಲ್ಲಿ ಇಂದಿರಾ ಗಾಂಧಿ ಮುಂದೆ ಇದ್ದು, ನರೇಂದ್ರ ಮೋದಿ ಹಿಂದೆ ನಿಂತು ಇಣುಕುತ್ತಿದ್ದಾರೆ. ಈ ಫೋಟೋವನ್ನು ಶೇರ್‌ ಮಾಡಿ, ‘ಸಾಹೇಬರು ಕಾಂಗ್ರೆಸ್ಸಿಗರಲ್ಲಿ ಒಬ್ಬರಾಗಿದ್ದಾರೆ. ಈಗ ಭಕ್ತರು ಏನು ಹೇಳುತ್ತಾರೆ’ ಎಂದು ಬರೆಯಲಾಗಿದೆ.

ಈ ಪೋಸ್ಟ್‌ ಈಗ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ಗಳಲ್ಲಿ ವೈರಲ್‌ ಆಗುತ್ತಿದೆ. ‘ವೋಟ್‌ ಫಾರ್‌ ಎಐಎಂಐಎಂ’ ಪೇಜ್‌ನಲ್ಲಿಯೂ ಈ ಪೋಟೋ ಪೋಸ್ಟ್‌ ಮಾಡಿದ್ದು, ಅದು 5000ಕ್ಕೂ ಹೆಚ್ಚು ಬಾರಿ ಶೇರ್‌ ಆಗಿದೆ.

ಆದರೆ ನಿಜಕ್ಕೂ ಇಂದಿರಾ ಗಾಂಧಿ ಅವರೊಂದಿಗೆ ಮೋದಿ ಕಾಣಿಸಿಕೊಂಡಿದ್ದರೇ ಎಂದು ಪರಿಶೀಲಿಸಿದಾಗ ಇದು ಫೋಟೋಶಾಪ್‌ ಮೂಲಕ ಎಡಿಟ್‌ ಮಾಡಿರುವ ಚಿತ್ರ ಎಂಬುದು ಪತ್ತೆಯಾಗಿದೆ. ಮೂಲ ಚಿತ್ರದಲ್ಲಿ ನರೇಂದ್ರ ಮೋದಿ ಅವರಿಲ್ಲ. ಆಲ್ಟ್‌    ನ್ಯೂಸ್‌ ಸುದ್ದಿಸಂಸ್ಥೆಯು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಹೊರಟಾಗ ‘ದಿ ಕ್ವಿಂಟ್‌’ ‘ದಿ ಲೈಫ್‌ ಆ್ಯಂಡ್‌ ಟೈಮ್ಸ್‌ ಆಫ್‌ ಅಣ್ಣಾವ್ರು’ ಎಂಬ ಶೀರ್ಷಿಕೆಯಡಿ ಪ್ರಕಟಿಸಿದ್ದ ಲೇಖನವೊಂದು ಲಭ್ಯವಾಗಿದ್ದು, ಅದರಲ್ಲಿ ಮೂಲ ಚಿತ್ರ ಇದೆ. ಆ ಲೇಖನವನ್ನು ಕರ್ನಾಟಕದ ನಟಸಾರ್ವಭೌಮ ಡಾ. ರಾಜಕುಮಾರ್‌ ಅವರಿಗೆ ಅರ್ಪಿಸಲಾಗಿದೆ. ವೈರಲ್‌ ಆಗಿರುವ ಚಿತ್ರ ಮತ್ತು ಮೂಲ ಚಿತ್ರಗಳನ್ನು ಗಮನಿಸಿದಾಗ ಇದೊಂದು ಸುಳ್ಳುಸುದ್ದಿ ಎಂಬುದು ಸ್ಪಷ್ಟವಾಗುತ್ತದೆ.

- ವೈರಲ್ ಚೆಕ್ 

Follow Us:
Download App:
  • android
  • ios