’ಆಪರೇಶನ್ ಕಮಲ’ ಕ್ಕಾಗಿ ಬಿಜೆಪಿ ಸರ್ಕಸ್ | ಕಾಂಗ್ರೆಸ್‌ನ ಶಾಸಕರು ಬಿಜೆಪಿಗೆ ಸೇರಲು ಉತ್ಸುಕತೆ ತೋರಿಸುತ್ತಿಲ್ಲ | ಕಾಂಗ್ರೆಸ್ ಶಾಸಕರ ಕುರ್ಚಿಗಳನ್ನು ಹೈಜಾಕ್ ಮಾಡಲು ಬಿಜೆಪಿ ಪ್ಲಾನ್ 

ಬೆಂಗಳೂರು (ಸೆ. 25): ಕೆಲವು ಶಾಸಕರು ಬಿಜೆಪಿ ಸೇರುತ್ತಾರೆ. ಬಿಜೆಪಿ ಸರ್ಕಾರ ರಚನೆ ಆಗುತ್ತದೆ ಎಂದು ಹೇಳುತ್ತಾ ಹಲವಾರು ದಿನಗಳಾದರೂ ಕಾಂಗ್ರೆಸ್‌ನ ಶಾಸಕರು ಬಿಜೆಪಿಗೆ ಸೇರ್ಪಡೆ ಆಗುವ ಲಕ್ಷಣಗಳು ಗೋಚರಿಸುತ್ತಿಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಒಂದು ವೇಳೆ ಈ ಯೋಜನೆ ವಿಫಲವಾದರೆ ಬಿಜೆಪಿ ವಿಧಾನಸೌಧದಲ್ಲಿ ಇರುವ ಕಾಂಗ್ರೆಸ್ ಶಾಸಕರ ಕುರ್ಚಿಗಳನ್ನು ಹೈಜಾಕ್ ಮಾಡುವ ಯೋಜನೆ ರೂಪಿಸಿದೆ. ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕರು ಕೂರುವ ಕುರ್ಚಿಗಳನ್ನು ತನ್ನ ಬಳಿ
ಇಟ್ಟುಕೊಂಡರೆ ಅವರಲ್ಲಾ ಬಿಜೆಪಿಯ ಶಾಸಕರ ಜೊತೆಯಲ್ಲೇ ಕೂರುತ್ತಾರೆ.

ಆಗ ಸದನದಲ್ಲಿ ವಿಶ್ವಾಸ ಮತ ಸಾಬೀತುಪಡಿಸಿ ಅಧಿಕಾರ ಹಿಡಿಯುವುದು ಬಿಜೆಪಿಯ ಮಾಸ್ಟರ್ ಪ್ಲಾನ್ ಆಗಿದೆ. ಹೀಗಾಗಿ ವಿಧಾನಸೌಧದ ಕುರ್ಚಿಗಳಿಗೆ ಝಡ್ ಪ್ಲಸ್ ಭದ್ರತೆ ನೀಡಲು ಸರ್ಕಾರ ಮುಂದಾಗಿದೆ ಎಂದು ಸುಳ್ ಸುದ್ದಿ ಮೂಲಗಳು ತಿಳಿಸಿವೆ