ಎಚ್ ಡಿಕೆ ಅತ್ತಿದ್ದು ವಿಕ್ಸ್’ನಿಂದ್ಲಾ?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 17, Jul 2018, 11:22 AM IST
Fake news about HDK Crying
Highlights

ಸಿಎಂ ಕುಮಾರಸ್ವಾಮಿ ಕಣ್ಣೀರಿಡುವುದು ಇತ್ತೀಚಿಗೆ ಹೆಚ್ಚಾಗುತ್ತಿದೆ. ವೇದಿಕೆ ಮೇಲೆ, ಸದನದಲ್ಲಿ ಇದ್ದಕ್ಕಿದ್ದಂತೆ ಅಳುತ್ತಾರೆ. ಇವರ ಅಳು ಚರ್ಚೆಯ ವಿಷಯವಾಗಿದೆ. ಅವರು ನಿಜವಾಗಿಯೂ ಅಳುತ್ತಾರಾ? ಅನುಕಂಪದ ಅಲೆಯಾ ಎಂಬ ಮಾತು ಕೇಳಿ ಬರುತ್ತದೆ. ಇದರ ಬಗ್ಗೆ ಜಮೀರ್ ಅಹ್ಮದ್ ಹೇಳಿಕೆ ಬಹಳ ಇಂಟರೆಸ್ಟಿಂಗ್ ಆಗಿದೆ. 

ಬೆಂಗಳೂರು (ಜು. 18):  ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವೇದಿಕೆಯಲ್ಲಿ ಅಳುವಾಗ ಅವರ ಕೈಲಿ ಕರ್ಚೀಫ್ ಇತ್ತು. ಹೀಗಾಗಿ ಅವರು ಅತ್ತಿದ್ದು ವಿಕ್ಸ್ ಒರೆಸಿಕೊಂಡ ಕರ್ಚೀಫಿ ನಿಂದಲೋ ಅಥವಾ ಸಹಜವಾಗಿಯೋ ಎಂದು ಸಚಿವ ಜಮೀರ್‌ಗೆ ಬಿಜೆಪಿ ನಾಯಕರು ಪ್ರಶ್ನಿಸಿದ್ದಾರೆ.

ಚುನಾವಣಾ ಪ್ರಚಾರದ ವೇಳೆ ಕುಮಾರಸ್ವಾಮಿ ವಿರುದ್ಧ  ವಾಗ್ದಾಳಿ ನಡೆಸಿದ್ದ ಜಮೀರ್, ಒಮ್ಮೆ ಕುಮಾರಸ್ವಾಮಿ ವೇದಿಕೆಯಲ್ಲಿ ಅಳುವಾಗ ಕರ್ಚೀಫ್ ನೆಲಕ್ಕೆ ಬಿದ್ದಿತ್ತು. ನಾನು ಹೆಕ್ಕಿಕೊಟ್ಟೆ. ಆಗ ಕರ್ಚೀಫಿನಿಂದ ಘಮ್ಮೆಂದು ವಿಕ್ಸ್ ಘಾಟು ಬಂತು. ಅವರು ಅಳುವುದು ಅದರ ಸಹಾಯದಿಂದ ಎಂಬುದು ಆಗಲೇ ಗೊತ್ತಾಯ್ತು ಎಂದು ಹೇಳಿದ್ದರು. ಹೀಗಾಗಿ ಬಿಜೆಪಿ ನಾಯಕರು ಈ ಬಾರಿಯೂ ಎಚ್‌ಡಿಕೆ ವಿಕ್ಸ್ ನಿಂದಲೇ ಅತ್ತಿದ್ದಾರೆಯೇ ಎಂಬುದನ್ನು ತಿಳಿದುಕೊಂಡು ಹೇಳಿ ಎಂದು ಜಮೀರ್‌ಗೆ ಕೇಳಿರುವುದು ಸುಳ್‌ಸುದ್ದಿ  ಮೂಲಗಳಿಗೆ ಗೊತ್ತಾಗಿದೆ.

loader