ಉದ್ಯೋಕ್ಕಾಗಿ ಸಂಪರ್ಕಿಸಿದ ಏಜೆನ್ಸಿಯಿಂದ ವಂಚನೆಗೆ ಒಳಗಾಗಿ ಪರದೇಶಗಳಲ್ಲಿ ಗುಲಾಮಗಳಾಗಿ ಪಡಬಾರದ ಹಿಂಸೆ ಅನುಭವಿಸಿದ ಉಡುಪಿಯ ಮಹಿಳೆ ಜೆಸಿಂತಾ ಕೊನೆಗೂ ಹುಟ್ಟೂರಿಗೆ ಮರಳಿದ್ದಾರೆ.

ಉಡುಪಿ (ಸೆ.25): ಉದ್ಯೋಕ್ಕಾಗಿ ಸಂಪರ್ಕಿಸಿದ ಏಜೆನ್ಸಿಯಿಂದ ವಂಚನೆಗೆ ಒಳಗಾಗಿ ಪರದೇಶಗಳಲ್ಲಿ ಗುಲಾಮಗಳಾಗಿ ಪಡಬಾರದ ಹಿಂಸೆ ಅನುಭವಿಸಿದ ಉಡುಪಿಯ ಮಹಿಳೆ ಜೆಸಿಂತಾ ಕೊನೆಗೂ ಹುಟ್ಟೂರಿಗೆ ಮರಳಿದ್ದಾರೆ.

ಕಾರ್ಖಾಳ ತಾಲೂಕಿನ ಮುದರಂಗಡಿ ಗ್ರಾಮದ ನಿಮಾಸಿಯಾಗಿರುವ 46 ವರ್ಷದ ಜೆಸಿಂತಾ ಉದ್ಯೋಗ ನೆಪದಲ್ಲಿ ಸೌದಿ ಅರೇಬಿಯಾದ ಉದ್ಯಮಿಯೊಬ್ಬನಿಗೆ 5 ಲಕ್ಷ ರೂಪಾಯಿಗೆ ಮಾರಾಟವಾಗಿದ್ದರು. ಆತನ ಮನೆಯಲ್ಲಿ 14 ತಿಂಗಳು ಕದ್ಧಮ್​ ( ಸೌದಿ ಭಾಷೆಯಲ್ಲಿ ಗುಲಾಮ) ಆಗಿ ಬ ನರಕಯಾತನೆ ಅನುಭವಿಸಿದ್ದ, ಜೆಸಿಂತಾ ಶುಕ್ರವಾರ ರಾತ್ರಿ ಹುಟ್ಟೂರಿಗೆ ಆಗಮಿಸಿದ್ದಾರೆ. ಕ್ಷಯ, ರಕ್ತ ಹೀನತೆಯಿಂದ ಬಳಲುತ್ತಿರುವ ಅವರು ಮಾನಸಿಕವಾಗಿ, ದೈಹಿಕವಾಗಿಯೂ ಕುಗ್ಗಿ ಹೋಗಿದ್ದು, ಉಡುಪಿಯ ಡಾ. ಬಾಳಿಗಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಆಗಿದ್ದೇನು?

ಕ್ಷಯ ರೋಗದಿಂದ ಗಂಡನನ್ನು ಕಳೆದುಕೊಂಡ ಜೆಸಿಂತಾ ಮೂರು ಮಕ್ಕಳನ್ನು ಸಾಕುವುದಕ್ಕಾಗಿ ಮುಂಬೈನ ಟ್ರಿಯೋ ಟ್ರಾಕ್​ ಟ್ರಾವೆಲ್​ ಏಜೆಬ್ಸಿಯ ಜಾಹೀರಾತು ನಂಬಿ ಕತಾರ್​ನಲ್ಲಿ ತಿಂಗಳಿಗೆ 25 ಸಾವಿರ ಸಂಬಳ ಉದ್ಯೋಗದ ಆಸೆಯಿಂದಲೇ ಅರ್ಜಿ ಸಲ್ಲಿಸಿದ್ದರು. ಆದರೆ ಇವಳನ್ನು ಆ ಸಂಸ್ಥೆ ಕಳುಹಿಸಿದ್ದು, ಸೌದಿ ಅರೇಬಿಯಾಗೆ. ಅಲ್ಲಿನ ಅಬ್ದುಲ್​ ಅತ್​ ಮುತೈರಿ ಎಂಬಾತ ಜೆಸಿಂತಾಳರನ್ನು ಹರಾಜಿನಲ್ಲಿ 5 ಲಕ್ಷ ರೂಪಾಯಿಗೆ ಖರೀಸಿದ್ದರು. ಪ್ರತಿ ತಿಂಗಳು 16 ಸಾವಿರ ಸಂಬಳಕ್ಕೆ ನರಕಯಾತನೆಯ ಬದುಕು ಅನುಭವಿಸಿದ್ದರು. ಹಗಲು ರಾತ್ರಿ ಉಪವಾಸ ಅನುಭವಿಸಿ, ರೋಗಿಯಾಗಿದ್ದರು. 9 ತಿಂಗಳ ಹಿಂದೆ ಹೇಗೋ ಮಕ್ಕಳಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಆ ಬಳಿಕ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಡಾ. ರವೀಂದ್ರನಾಥ ಶ್ಯಾನುಭಾಗ ಅವರ 9 ತಿಂಗಳ ಪ್ರಯತ್ನ, ಕೇಂದ್ರ ಸರ್ಕಾರ ಹಾಗೂ ಗಲ್ಫ್ ರಾಷ್ಟ್ರಗಳಲ್ಲಿರುವ ಕನ್ನಡಿಗರ ಸಂಘಟನೆಗಳ ನೆರವಿನಿಂದ ಜೆಸಿಂತಾ ಈಗ ಸುರಕ್ಷಿತವಾಗಿ ತಾಯ್ನಾಡಿಗೆ ವಾಪಾಸಾಗಿದ್ದಾರೆ. ಮನೆ ಯಜಮಾನನೊಡನೆ ಸಂಧಾನ ನಡೆಸಿ, 25 ಲಕ್ಷ ರೂ. ಹೊಂದಿಸಿ ಈಗ ಸುರಕ್ಷಿತವಾಗಿ ವಾಪಸ್ಸಾಗಿದ್ದಾರೆ.