Asianet Suvarna News Asianet Suvarna News

ಆ್ಯಕ್ಸೆಂಚರ್ ಹೆಸರಲ್ಲಿ ನಕಲಿ ಕ್ಯಾಂಪಸ್ ಸೆಲೆಕ್ಷನ್: ಆರೋಪಿಗಳ ಬಂಧನ

ಇಲ್ಲಿನ ಪ್ರತಿಷ್ಠಿತ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಹಾಗೂ ಸೋಮವಾರ ಪೇಟೆ ಕಾಲೇಜಿನ ಒಟ್ಟು 41 ವಿದ್ಯಾರ್ಥಿ ನಿಯರಿಗೆ ಬೆಂಗಳೂರಿನ ಪ್ರತಿಷ್ಠಿತ ಕಂಪನಿ ಯೊಂದರ ಹೆಸರಿನಲ್ಲಿ ಕ್ಯಾಂಪಸ್ ಸಂದರ್ಶನ ನಡೆಸಿ ವಂಚಿಸಿರುವ ಪ್ರಕರಣ ನಡೆದಿದೆ.

Fake Campus Selection in The name of Accenture

ಮಡಿಕೇರಿ(ಜು.27): ಇಲ್ಲಿನ ಪ್ರತಿಷ್ಠಿತ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಹಾಗೂ ಸೋಮವಾರ ಪೇಟೆ ಕಾಲೇಜಿನ ಒಟ್ಟು 41 ವಿದ್ಯಾರ್ಥಿ ನಿಯರಿಗೆ ಬೆಂಗಳೂರಿನ ಪ್ರತಿಷ್ಠಿತ ಕಂಪನಿ ಯೊಂದರ ಹೆಸರಿನಲ್ಲಿ ಕ್ಯಾಂಪಸ್ ಸಂದರ್ಶನ ನಡೆಸಿ ವಂಚಿಸಿರುವ ಪ್ರಕರಣ ನಡೆದಿದೆ.

ಐಟಿ ಕಂಪನಿ ‘ಆ್ಯಕ್ಸೆಂಚರ್’ ಹೆಸರಿನಲ್ಲಿ ಎರಡು ತಿಂಗಳ ಹಿಂದೆ ಕ್ಯಾಂಪಸ್ ಸಂದರ್ಶನ ನಡೆಸಿದ ಗಣೇಶ ಎಂಬಾತ ಉದ್ಯೋಗ ಭರವಸೆ ನೀಡಿ ವಿದ್ಯಾರ್ಥಿನಿಯರಿಂದ ಹಣ ಪಡೆದು ವಂಚಿಸಿದ್ದು, ಈ ಸಂಬಂ‘ ಆರೋಪಿಯನ್ನು ಬೆಂಗಳೂರಿನಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಪ್ರಾಥಮಿಕ ಹಂತದ ವಿಚಾರಣೆಯಲ್ಲಿ ಕಂಪನಿ ಹೆಸರಿನಲ್ಲಿ ಈತ ನಕಲಿ ಉದ್ಯೋಗ ನೇಮಕಾತಿ ಪತ್ರಗಳನ್ನು ನೀಡಿದ್ದು, ಬೆಂಗಳೂರಿನ ಮಾರೇನಹಳ್ಳಿ ಬಳಿಯ ಪಿಜಿಯಲ್ಲಿ ವಿದ್ಯಾರ್ಥಿನಿಯರಿಗೆ ವಾಸ್ತವ್ಯ ಕಲ್ಪಿಸಿದ್ದ ಎಂಬುದು ಗೊತ್ತಾಗಿದೆ. ನೌಕರಿ ಭರವಸೆ ನೀಡಿ ತಿಂಗಳು ಕಳೆದರೂ ಉದ್ಯೋಗ ನೀಡದ ಹಿನ್ನೆಲೆಯಲ್ಲಿ ಹಾಗೂ ನಿಮ್ಮ ದೈಹಿಕ ಪರೀಕ್ಷೆ ನಡೆಸಬೇಕು ಎಂಬ ಗಣೇಶ್ ಮಾತು, ವರ್ತನೆಯಿಂದ ಅನುಮಾನಗೊಂಡ ವಿದ್ಯಾರ್ಥಿನಿಯರು ಬೆಂಗಳೂರಿನಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ಈ ಹಂತದಲ್ಲಿ ಪರಾರಿಯಾಗಲು ಸಿದ್ಧತೆ ನಡೆಸಿದ್ದ ಗಣೇಶನನ್ನು ಪೊಲೀಸರು ಬೆಂಗಳೂರಿನಲ್ಲಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಎಫ್‌ಎಂಸಿ ಕಾಲೇಜಿನಲ್ಲಿ ಕಳೆದ ವರ್ಷ ಏಪ್ರಿಲ್‌ನಲ್ಲಿ ಈ ಕ್ಯಾಂಪಸ್ ಸೆಲೆಕ್ಷನ್ ಪ್ರಕ್ರಿಯೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಇದರ ನೇತೃತ್ವ ವಹಿಸಿದ್ದ ಉಪನ್ಯಾಸಕರೊಬ್ಬರು ವಂಚನೆಯಲ್ಲಿ ಭಾಗಿಯಾಗಿದ್ದಾರೆಂಬ ಆರೋಪಗಳು ಕೇಳಿಬಂದಿವೆ. ಅಲ್ಲದೆ ಪ್ರತಿ ವಿದ್ಯಾರ್ಥಿನಿಯ ರಿಂದ ತಲಾ ರೂ. 7000 ಪಡೆದಿರುವ ಆರೋಪವನ್ನು ವಿದ್ಯಾರ್ಥನಿಯರು ಗಣೇಶ್ ವಿರುದ್ಧ ಮಾಡಿದ್ದಾರೆ.

Follow Us:
Download App:
  • android
  • ios