ತಾಯ್ತಾ ಕಟ್ತೀನಿ ಅಂತ ವಂಚನೆ; ನಕಲಿ ಜ್ಯೋತಿಷಿಗೆ ಬಿತ್ತು ಗೂಸಾ!

First Published 9, Feb 2018, 11:16 AM IST
Fake Astrologer Cheats
Highlights

ಮಕ್ಕಳಿಗೆ ಯಂತ್ರ ಹಾಕ್ತಿನಿ ಅಂತ ಹೇಳಿದ ನಕಲಿ ಜ್ಯೋತಿಷಿಯೊಬ್ಬ  ಬ್ರೈನ್ ವಾಶ್ ಮಾಡಿ ವಿಷ ಸೇವಿಸುವಂತೆ ಮಾಡಿರುವ ಘಟನೆ  ಕೊಟ್ಟಿಗೆ ಪಾಳ್ಯದಲ್ಲಿ ನಡೆದಿದೆ.  

ಬೆಂಗಳೂರು (ಫೆ.09): ಮಕ್ಕಳಿಗೆ ಯಂತ್ರ ಹಾಕ್ತಿನಿ ಅಂತ ಹೇಳಿದ ನಕಲಿ ಜ್ಯೋತಿಷಿಯೊಬ್ಬ  ಬ್ರೈನ್ ವಾಶ್ ಮಾಡಿ ವಿಷ ಸೇವಿಸುವಂತೆ ಮಾಡಿರುವ ಘಟನೆ  ಕೊಟ್ಟಿಗೆ ಪಾಳ್ಯದಲ್ಲಿ ನಡೆದಿದೆ.  

ಕೊಟ್ಟಿಗೆ ಪಾಳ್ಯದ ನಿವಾಸಿ ಕುಮಾರ್ ಹಾಗೂ ರೇಷ್ಮಾ ದಂಪತಿ ಜ್ಯೋತಿಷಿಯಿಂದ ಮೋಸ ಹೋದವರು. ದಂಪತಿಗಳನ್ನು ಪರಿಚಯ ಮಾಡಿಕೊಂಡ  ಜ್ಯೋತಿಷಿ  ಅವರನ್ನು ವಶೀಕರಣ ಮಾಡಿ ಅವರ ಬಳಿಯಿದ್ದ ಹಣ,  ಚಿನ್ನಾಭರಣವನ್ನ ದೋಚಿದ್ದಾನೆ.  ಇದು ಗೊತ್ತಾಗ ಬಾರದು ಎಂದು ವಿಷ ಸೇವಿಸುವಂತೆ ಹೇಳಿದ್ದಾನೆ. ವಶೀಕರಣಕ್ಕೆ ಒಳಗಾದ ದಂಪತಿ ಜ್ಯೋತಿಷಿ ಮಾತನ್ನ ನಂಬಿ ವಿಷ ಸೇವಿಸಿದ್ದಾರೆ.  ಈಗ ಆಸ್ಪತ್ರೆಗೆ ದಾಖಲಾಗಿದ್ದಾರೆ.  ಈ ವಿಚಾರ ಗೊತ್ತಾಗುತ್ತಿದ್ದಂತೆ  ಸಂಬಂಧಿಗಳು ನಕಲಿ ಜ್ಯೋತಿಷಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.

 

loader