ನವದೆಹಲಿ[ಸೆ.12]: ವಾಹನಗಳಿಗೆ ಪೆಟ್ರೋಲ್‌ ಹಾಕಿಸುವ ವೇಳೆ ಮೊಬೈಲ್‌ ಬಳಕೆ ಮಾಡುತ್ತಿದ್ದರೆ ವಾಹನಗಳು ಸ್ಫೋಟಗೊಳ್ಳುತ್ತವೆ ಎನ್ನುವ ಸಂದೇಶದೊಂದಿಗೆ ಕಾರೊಂದು ಸ್ಫೋಟಗೊಂಡು ಛಿದ್ರ ಛಿದ್ರವಾಗುತ್ತಿರುವ ಭಯಾನಕ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಲಾಗುತ್ತಿದೆ. ವಿಡಿಯೋದಲ್ಲಿ ಪೆಟ್ರೋಲ್‌ ಬಂಕ್‌ ಎದುರು ನಿಂತಿದ್ದ ಕಾರೊಂದು ಏಕಾಏಕಿ ಸ್ಫೋಟಗೊಳ್ಳುವ ದೃಶ್ಯವಿದೆ.

ಈ ವಿಡಿಯೋಗಳನ್ನು ವಾಟ್ಸ್‌ಆ್ಯಪ್‌ ಮತ್ತು ಫೇಸ್‌ಬುಕ್‌ ಮೂಲಕ ಕಳುಹಿಸಿ, ‘ಪೋಷಕರು ಪೆಟ್ರೋಲ್‌ ಬಂಕ್‌ನಲ್ಲಿ ಕಾರಿಗೆ ಪೆಟ್ರೋಲ್‌ ತುಂಬಿಸುತತಿದ್ದ ವೇಳೆ, ಕಾರೊಳಗಿದ್ದ ಮಕ್ಕಳು ಮೊಬೈಲ್‌ನಲ್ಲಿ ಆಟವಾಡುತ್ತಿದ್ದರು. ಇದರಿಂದಾಗಿ ಕಾರು ಸ್ಫೋಟಗೊಂಡಿದೆ. ಪ್ರತಿಯೊಬ್ಬರಿಗೂ ಈ ಮಾಹಿತಿ ನೀಡಿ. ನಿಮ್ಮ ಪರಿಚಿತರಿಗೆಲ್ಲಾ ಈ ಸಂದೇಶ ಕಳುಹಿಸಿ ಜಾಗೃತಗೊಳಿಸಿ’ ಎಂದು ಹೇಳಲಾಗಿದೆ.

ಆದರೆ ಈ ಸುದ್ದಿ ನಿಜವೇ ಎಂದು ಆಲ್ಟ್‌ನ್ಯೂಸ್‌ ಪರಿಶೀಲಿಸಿದಾಗ 2018ರಿಂದಲೇ ಈ ಸುದ್ದಿ ಸೋಷಿಯಲ್‌ ಮೀಡಿಯಾಗಳಲ್ಲಿ ಹರಿದಾಡುತ್ತಿದೆ ಎಂದು ತಿಳಿದುಬಂದಿದೆ. ಹಾಗೆಯೇ 2017ರಲ್ಲಿ ‘ದ ಸನ್‌’ ಸುದ್ದಿ ಮಾಧ್ಯಮದಲ್ಲಿ ಪ್ರಕಟವಾಗಿದ್ದ ಸುದ್ದಿಯೊಂದು ಲಭ್ಯವಾಗಿದ್ದು, ಇದರಲ್ಲಿ ವೈರಲ್‌ ಆಗಿರುವ ಫೋಟೋವೇ ಇದೆ. ಅದರಲ್ಲಿ ಘಟನೆಯು ಬ್ರೆಜಿಲ್‌ನ ರಿಯೋ ಡಿ ಜನೈರೋದಲ್ಲಿ ನಡೆದಿದ್ದಾಗಿ ಹೇಳಲಾಗಿದೆ.

ಪ್ಯಾಕ್ಟ್‌ ಚೆಕ್‌ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ವರದಿ ಪ್ರಕಾರ ಕಾರು ಸ್ಫೋಟಗೊಳ್ಳಲು ಮೊಬೈಲ್‌ ಕಾರಣವಲ್ಲ. ಆದರೆ ಸುಮಾರು ಎರಡು ಮೂರು ವರ್ಷದಿಂದ ಈ ವಿಡಿಯೋ ಸುಳ್ಳು ಸುದ್ದಿಯೊಂದಿಗೆ ಹರಿದಾಡಿ, ಜನರಲ್ಲಿ ಆತಂಕವನ್ನುಂಟುಮಾಡುತ್ತಿದೆ.