ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಸಾಮಾನ್ಯ ಆಟೋ ಡ್ರೈವರ್‌ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮೋದಿಯಂತೆಯೇ ಕಾಣುವ ವ್ಯಕ್ತಿಯೊಬ್ಬರು ಆಟೋ ಡ್ರೈವ್‌ ಮಾಡುತ್ತಿರುವ ಫೋಟೋವನ್ನು ಪೋಸ್ಟ್‌ ಮಾಡಿ, ‘ಇವರು ಪ್ರಧಾನಿ ನರೇಂದ್ರ ಮೋದಿ ಅವರ ಹಿರಿಯ ಅಣ್ಣ’ ಎಂದು ಒಕ್ಕಣೆ ಬರೆದು ಶೇರ್‌ ಮಾಡಲಾಗುತ್ತಿದೆ.

ಬಿಜೆಪಿ-ನ್ಯೂದೆಲ್ಲಿ ಫೇಸ್‌ಬುಕ್‌ ಪೇಜ್‌ ಇದನ್ನು ಮೊದಲಿಗೆ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದೆ. ನರೇಂದ್ರ ಮೋದಿ ಪೇಸ್‌ಬುಕ್‌ ಪೇಜ್‌ ಸೇರಿದಂತೆ ಹಲವರು ಇದನ್ನು ಶೇರ್‌ ಮಾಡಿದ್ದಾರೆ. ಟ್ವೀಟರ್‌ನಲ್ಲಿ ಕೂಡ ಈ ಫೋಟೋ ವೈರಲ್‌ ಆಗುತ್ತಿದೆ.

ಆದರೆ ಫೋಟೋದಲ್ಲಿರುವ ವ್ಯಕ್ತಿ ನಿಜಕ್ಕೂ ಮೋದಿ ಸಹೋದರರೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳುಸುದ್ದಿ ಎಂದು ತಿಳಿದುಬಂದಿದೆ. 2016ರಿಂದಲೂ ಇದೇ ರೀತಿಯ ಹಲವು ಸುದ್ದಿಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ವಾಸ್ತವವಾಗಿ ಫೋಟೋದಲ್ಲಿರುವ ವ್ಯಕ್ತಿ ಮೋದಿ ಸಹೋದರ ಅಲ್ಲ. ಅವರ ಹೆಸರು ಶೇಕ್‌ ಆಯುಬ್‌. ಇವರು ತೆಲಂಗಾಣದ ಅದಿಲಾಬಾದ್‌ ಜಿಲ್ಲೆಯಲಲಿ ಆಟೋ ಓಡಿಸಿ ಜೀವನ ನಡೆಸುತ್ತಿದ್ದಾರೆ.

ಅಂದಹಾಗೆ ಪ್ರಧಾನಿ ನರೇಂದ್ರ ಮೋದಿಯ ಸಹೋದರರು ಯಾರೂ ಆಟೋ ಓಡಿಸುತ್ತಿಲ್ಲ. ಮೋದಿ ಅವರಿಗೆ ಮೂವರು ಸಹೋದರರಿದ್ದಾರೆ. ಸೋಂಬಾಯ್‌ ಮೋದಿ, ಅಮೃತ್‌ ಮೊದಿ ಮತ್ತು ಪಹ್ಲಾದ್‌ ಮೋದಿ. ಸೋಂಬಾಯ್‌ ಮೋದಿ ವೃದ್ಧಾಶ್ರಮ ನಡೆಸುತ್ತಿದ್ದಾರೆ, ಅಮೃತ್‌ ಮೋದಿ ಖಾಸಗಿ ಕಂಪನಿಯಲ್ಲಿ ಕಾರ‍್ಯನಿರ್ವಹಿಸುತ್ತಿದ್ದಾರೆ. ಇನ್ನು ಪಹ್ಲಾದ್‌ ಮೋದಿ ಅಂಗಡಿಯೊಂದರ ಮಾಲಿಕರಾಗಿದ್ದಾರೆ.

- ವೈರಲ್ ಚೆಕ್