ಮಹಾಭಾರತದಲ್ಲಿ ಉಲ್ಲೇಖವಿರುವ ಶ್ರೀಕೃಷ್ಣನ ಸಾಮ್ರಾಜ್ಯವಾದ ದ್ವಾರಕಾದ ಕುರುಹುಗಳು ಈಗಲೂ ಲಭ್ಯವಿವೆ ಎಂದು ಪ್ರಾಚೀನ ಕಾಲದ ಕಲಾಕೃತಿಗಳ ಹಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

‘ಇದು ಶ್ರೀಕೃಷ್ಣನ ದ್ವಾರಕೆ. ಗುಜರಾತಿನಲ್ಲಿರುವ ಈ ಸ್ಥಳ ಸದ್ಯ ನೀರಿನಲ್ಲಿ ಮುಳುಗಿದೆ. ಇದು ಈಗಲೂ ಅಸ್ತಿತ್ವದಲ್ಲಿದೆ. ಆದರೆ ಕ್ರಿಶ್ಚಿಯನ್ನರು ದ್ವಾರಕೆ ಇರುವುದಕ್ಕೆ ಯಾವುದೇ ಸಾಕ್ಷ್ಯಾಧಾರ ಇಲ್ಲ ಎನ್ನುತ್ತಾರೆ!’ ಎಂದಿದೆ. ಈ ಸಂದೇಶ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗುತ್ತಿದೆ. ಅದರೊಂದಿಗೆ ನೀರಿನಲ್ಲಿ ಮುಳುಗಿರುವ ಕಣ್ಮನ ಸೆಳೆಯುವ ವಾಸ್ತುಶಿಲ್ಪ ಕಲೆಗಳ 4 ಫೋಟೋಗಳಿವೆ.

Fact check: 2000 ರೂ ನೋಟು ಮತ್ತೆ ನಿಷೇಧವಾಗುತ್ತಾ?

ಆದರೆ ಈ ಫೋಟೋಗಳು ನಿಜಕ್ಕೂ ದ್ವಾರಕೆಯದ್ದೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳು ಸುದ್ದಿ ಎಂದು ತಿಳಿದುಬಂದಿದೆ. ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಇವುಗಳಲ್ಲಿ ಒಂದು ಅವನತಿ ಹೊಂದಿದ ಈಜಿಫ್ಟ್‌ ಸಾಮ್ರಾಜ್ಯದ ಕೃತಕ ಫೋಟೋ ಎಂದು ತಿಳಿದುಬಂದಿದೆ. ಇನ್ನು ಎರಡನೇ ಚಿತ್ರ ತಮಿಳುನಾಡಿನದ್ದು. ಮೂರನೇ ಚಿತ್ರ ಕೆರಿಬಿಯನ್‌ ಸಮುದ್ರದ ಜಮೈಕಾದ್ದು.

ಈ ಫೋಟೋಗಳು ನೆಫ್ಚೂನ್ ಮೆಮೊರಿಯಲ್‌ ರೀಫ್‌ ಬ್ಲಾಗ್‌ನಲ್ಲಿ ಲಭ್ಯವಿವೆ. 4ನೇ ಫೋಟೋ ಅಟ್ಲಾಂಟಿಕ್‌ನ ಪುರಾತನ ನಗರದ್ದು ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಈ ಬಗ್ಗೆ ಸ್ಪಷ್ಟತೆ ಇಲ್ಲ. ಒಟ್ಟಾರೆ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗಿರುವ ಈ ನಾಲ್ಕೂ ಫೋಟೋಗಳೂ ಗುಜರಾತಿನ ದ್ವಾರಕೆಯದ್ದಲ್ಲ. ಎರಡು ಫೋಟೋಗಳು ಅಮೆರಿಕದ ಫೆä್ಲೕರಿಡಾದ್ದು ಮತ್ತೊಂದು ಫೋಟೋ ತಮಿಳುನಾಡಿನದ್ದು.

- ವೈರಲ್ ಚೆಕ್