Fact Check: ಹಣ ಕೊಟ್ಟು ತನ್ನ ದೇಶದ ಮಹಿಳೆಯರನ್ನು ವಿವಾಹವಾಗಲು ಹೇಳ್ತಿದೆಯಾ ಐಸ್‌ಲ್ಯಾಂಡ್?

ಐಸ್‌ಲ್ಯಾಂಡ್‌ ದೇಶವು ಪ್ರವಾಸಿಗರನ್ನು ಉತ್ತೇಜಿಸುವ ದೃಷ್ಟಿಯಿಂದ ತನ್ನ ದೇಶದಲ್ಲಿರುವ ಮಹಿಳೆಯರನ್ನು ವಿವಾಹವಾಗಲು ತಿಂಗಳಿಗೆ 5000 ಡಾಲರ್‌ ಹಣ ನೀಡುತ್ತಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

Fact Check of Iceland giving money to immigrants to marry its women

ಐಸ್‌ಲ್ಯಾಂಡ್‌ ದೇಶವು ಪ್ರವಾಸಿಗರನ್ನು ಉತ್ತೇಜಿಸುವ ದೃಷ್ಟಿಯಿಂದ ತನ್ನ ದೇಶದಲ್ಲಿರುವ ಮಹಿಳೆಯರನ್ನು ವಿವಾಹವಾಗಲು ತಿಂಗಳಿಗೆ 5000 ಡಾಲರ್‌ ಹಣ ನೀಡುತ್ತಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

‘ಫುಂಕು ಯು’ ಎಂಬ ಫೇಸ್‌ಬುಕ್‌ ಪೇಜ್‌ನಲ್ಲಿ ‘ಟೇಲ್ಸ್‌ ಕಾರ್ಟ್‌’ ವೆಬ್‌ಸೈಟಿನ ಈ ಕುರಿತ ಲೇಖನವನ್ನು ಶೇರ್‌ ಮಾಡಿ, ‘ಸ್ವರ್ಗವೇ ಕೈ ಬೀಸಿ ಕರೆಯುತ್ತಿದೆ’ ಎಂದು ಒಕ್ಕಣೆ ಬರೆಲಾಗಿದೆ. ಲೇಖನದ ಶೀರ್ಷಿಕೆಯಲ್ಲಿ ‘ಐಸ್‌ಲ್ಯಾಂಡ್‌ ತನ್ನ ದೇಶದ ಹೆಣ್ಣು ಮಕ್ಕಳನ್ನು ವಿದೇಶಿಗರು ವಿವಾಹವಾಗಲು ಹಣ ನೀಡಿ ಪ್ರೋತ್ಸಾಹಿಸುತ್ತಿದೆ- ಏಕೆ ಗೊತ್ತಾ?’ ಎಂದಿದೆ.

ಸದ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಫುಂಕ್‌ ಯು ಪೋಸ್ಟ್‌ ಮಾಡಿದ್ದ ಸುದ್ದಿಯು 330 ಬಾರಿ ಶೇರ್‌ ಆಗಿದೆ. ಅದರಲ್ಲಿ ಹೆಚ್ಚು ಜನರು ‘ಈ ಬಗ್ಗೆ ಮಾಹಿತಿ ನೀಡುವಂತೆ ಕಾಮೆಂಟ್‌ ಮಾಡಿದ್ದಾರೆ.

ಆದರೆ ಈ ಸುದ್ದಿ ನಿಜವೇ ಎಂದು ಇಂಡಿಯಾ ಟುಡೇ ಆ್ಯಂಟಿ ಫೇಕ್‌ ನ್ಯೂಸ್‌ ವಾರ್‌ ರೂಮ್‌ ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂದು ತಿಳಿದುಬಂದಿದೆ. 2016ರಿಂದಲೂ ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಎಂದು ತಿಳಿದುಬಂದಿದೆ. ಅಲ್ಲಿಗೆ ಐಸ್‌ಲ್ಯಾಂಡ್‌ ತನ್ನ ದೇಶದ ಮಹಿಳೆಯರನ್ನು ವಿವಾಹವಾಗಲು ವಿದೇಶಿಗರಿಗೆ ಹಣ ನೀಡುತ್ತಿದೆ ಎಂಬ ಸುದ್ದಿ ಸುಳ್ಳು.

 

Latest Videos
Follow Us:
Download App:
  • android
  • ios