Fact Check: ಮೋದಿ ಭೇಟಿ ವೇಳೆ ಕೇಸರಿ ಬಟ್ಟೆ ಧರಿಸಿದ್ರಾ ದುಬೈ ರಾಜಕುಮಾರ?

ಅಬುದಾಬಿ ರಾಜಕುಮಾರ ಮಹಮ್ಮದ್‌ ಬಿನ್‌ ಝಾಯೇದ್‌ ಭಾರತದ ಪ್ರಧಾನಿ ನರೇಂದ್ರ ಮೋದಿ ಭೇಟಿ ವೇಳೆ ಕೇಸರಿ ಬಟ್ಟೆಧರಿಸಿದ್ದರು ಎನ್ನುವ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.  ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

Fact check of Crown Prince of Abu Dhabi was wearing a saffron cloth along with PM Modi

ಅಬುದಾಬಿ ರಾಜಕುಮಾರ ಮಹಮ್ಮದ್‌ ಬಿನ್‌ ಝಾಯೇದ್‌ ಭಾರತದ ಪ್ರಧಾನಿ ನರೇಂದ್ರ ಮೋದಿ ಭೇಟಿ ವೇಳೆ ಕೇಸರಿ ಬಟ್ಟೆಧರಿಸಿದ್ದರು ಎನ್ನುವ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

‘ಸ್ವತಃ ಮೋದಿಯೇ ದುಬೈ ಖಾನ್‌ರಂತೆ ರುಮಾಲು ಧರಿಸಿಲ್ಲ. ಆದರೆ ಝಾಯೇದ್‌ ಅವರು ಕೇಸರಿ ಬಟ್ಟೆಧರಿಸುವಂತೆ ಮಾಡಿದ್ದಾರೆ. ಮೋದಿ ಜಿ ನಿಮ್ಮ ಮನಸ್ಸಲ್ಲಿ ಏನಿದೆ?, ಜೈಶ್ರೀರಾಮ್‌’ ಎಂದು ಮೋದಿ ಮತ್ತು ಮಹಮ್ಮದ್‌ ಝಾಯೇದ್‌ ಕುಶಲೋಪರಿ ವಿಚಾರಿಸುತ್ತಿರುವ ಫೋಟೋವೊಂದನ್ನು ಪೋಸ್ಟ್‌ ಮಾಡಲಾಗಿದೆ. ಬಿಜೆಪಿ ಕಿಸಾನ್‌ ಮೋರ್ಚಾ ಸದಸ್ಯ ಅತುಲ್‌ ಕುಶ್ವಾಹಾ ಕೂಡ ಇದನ್ನು ಪೋಸ್ಟ್‌ ಮಾಡಿದ್ದಾರೆ. ಬಳಿಕ ಇದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಆದರೆ ಅಬುದಾಬಿ ರಾಜಕುಮಾರ ನಿಜಕ್ಕೂ ಕೇಸರಿ ಬಟ್ಟೆಧರಿಸಿದ್ದರೇ ಎಂದು ಪರಿಶೀಲಿಸಿದಾಗ ಇದು ಫೋಟೋಶಾಪ್‌ ಮೂಲಕ ಎಡಿಟ್‌ ಮಾಡಿರುವ ನಕಲಿ ಫೋಟೋ ಎಂಬುದು ಸ್ಪಷ್ಟವಾಗಿದೆ. ಪ್ರಧಾನಿ ಮೋದಿ ಇತ್ತೀಚೆಗೆ ಅಬುಧಾಬಿಗೆ ಭೇಟಿ ನೀಡಿದಾಗ ಅಲ್ಲಿನ ರಾಜಕುಮಾರ ಝಾಯೇದ್‌ ಅವರನ್ನು ಭೇಟಿಯಾಗಿದ್ದರು.

ಅಬುದಾಬಿ ಸರ್ಕಾರವು ಅಲ್ಲಿನ ಅತ್ಯುನ್ನತ ಗೌರವವಾದ ‘ಆರ್ಡರ್‌ ಆಫ್‌ ಝಾಯೇದ್‌’ ಪ್ರಶಸ್ತಿ ನೀಡಿ ಪ್ರಧಾನಿಯನ್ನು ಗೌರವಿಸಿತ್ತು. ಈ ಭೇಟಿಯ ಹಲವಾರು ಫೋಟೋಗಳು ಅಂತರ್ಜಾಲದಲ್ಲಿ ಲಭ್ಯವಿವೆ. ಮೂಲ ಫೋಟೋದಲ್ಲಿ ಝಾಯೇದ್‌ ಕೇಸರಿ ಬಟ್ಟೆಧರಿಸಿಲ್ಲ. ಬದಲಾಗಿ ಬಿಳಿ ಬಟ್ಟೆಧರಿಸಿದ್ದಾರೆ. ಪ್ರಧಾನಿ ಕಾರ‍್ಯಲಯ ಕೂಲ ಈ ಚಿತ್ರಗಳನ್ನು ತನ್ನ ಟ್ವೀಟರ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದೆ.

- ವೈರಲ್ ಚೆಕ್ 

Latest Videos
Follow Us:
Download App:
  • android
  • ios