ಫೇಸ್ಬುಕ್ ಲೈವ್ ಮೂಲಕ ಶೈಕ್ಷಣಿಕ ಮಾರ್ಗದರ್ಶನ | ಶನಿವಾರ, ಮೇ.27 ಸಂಜೆ 4 ಗಂಟೆಗೆ
ಈ ಬಾರಿ SSLC/PUC ಯಲ್ಲಿ ಉತ್ತೀರ್ಣರಾಗಿದ್ದೀರಾ? ನಿಮ್ಮ ಪುತ್ರ/ಪುತ್ರಿಗೆ ಮುಂದೇನು ಓದಿಸಬೇಕೆಂಬ ಬಗ್ಗೆ ಗೊಂದಲವಿದೆಯೇ? ಯಾವ್ಯಾವ ಕೋರ್ಸ್’ಗಳಿವೆ ಎಂಬುವುದರ ಬಗ್ಗೆ ಮಾಹಿತಿ ಬೇಕೇ? ಯಾವ ಕೋರ್ಸ್ ಮಾಡಬೇಕೆಂಬ ಬಗ್ಗೆ ಚಿಂತೆಯೇ? ಹಾಗಾದರೆ ಕರಿಯರ್ ಗೈಡ್'ರಿಂದ ಮಾರ್ಗದರ್ಶನ ಪಡೆಯಿರಿ. ಸುವರ್ಣ ವೆಬ್ ಕಡೆಯಿಂದ ಇಲ್ಲಿದೆ ನಿಮಗೆ ವೆರಿ ಸಿಂಪಲ್ ರೀತಿ. ನಾಳೆ (ಶನಿವಾರ, 27 ಮೇ) ಸಂಜೆ 4 ಗಂಟೆಗೆ ಫೇಸ್ಬುಕ್ ಲಾಗಿನ್ ಆಗಿ, ಸುವರ್ಣ ಫೇಸ್ಬುಕ್ ಪೇಜ್'ನಲ್ಲಿ ಖ್ಯಾತ ಕರಿಯರ್ ಗೈಡ್ ಭಾರತಿ ಸಿಂಗ್ ಲೈವ್ ಚಾಟ್ ನಡೆಸಿ ನಿಮ್ಮ ಗೊಂದಲಗಳನ್ನು ಪರಿಹರಿಸಿಕೊಳ್ಳಿ.

ಭಾರತಿ ಸಿಂಗ್ ಬಗ್ಗೆ:
ಸ-ಮುದ್ರ ಫೌಂಡೇಶನ್ ಹಾಗೂ ಸ-ಮುದ್ರ ಯುವ ಹೆಲ್ಪ್-ಲೈನ್’ನ ಸಂಸ್ಥಾಪಕರೂ, ಮುಖ್ಯಸ್ಥರೂ ಆಗಿರುವ ಭಾರತಿ ಸಿಂಗ್ ಶೈಕ್ಷಣಿಕ ಮಾರ್ಗದರ್ಶನ ಹಾಗೂ ಯುವಸಮುದಾಯಕ್ಕೆ ಆಪ್ತ –ಸಮಾಲೋಚನೆ ನಡೆಸುವ ಆಗಾಧ ಅನುಭವ ಹೊಂದಿದ್ದಾರೆ.
ವೈಯುಕ್ತಿಕ ಜೀವನದ ಸಮಸ್ಯೆಗಳಿಂದ ಹಿಡಿದು, ಶೈಕ್ಷಣಿಕ ಹಾಗೂ ಉದ್ಯೋಗ ಸಂಬಂಧಿ ವಿಚಾರಗಳಲ್ಲಿ 1000ಕ್ಕೂ ಹೆಚ್ಚು ತರಬೇತಿ ಶಿಬಿರಗಳನ್ನು ನಡೆಸಿರುವ ಭಾರತಿ ಸಿಂಗ್ 4000ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು, ಪೋಷಕರು ಹಾಗೂ ಯುವಜನರಿಗೆ ಮಾರ್ಗದರ್ಶನ ಮಾಡಿದ್ದಾರೆ.
