ಫೇಸ್’ಬುಕ್’ನಲ್ಲಿ ಜಾಹಿರಾತು ಮೂಲಕ ಹಣ ಮಾಡಿಕೊಳ್ಳುವವರಿಗೆ, ಸೆನ್ಸೇಶನಲ್ ಹೆಡ್’ಲೈನ್ ಕೊಟ್ಟು ಜನರನ್ನು ವಂಚಿಸುವವರಿಗೆ ಕಡಿವಾಣ ಹಾಕಲು ಫೇಸ್’ಬುಕ್ ಹೊಸ ನೀತಿಯನ್ನು ಪರಿಚಯಿಸಲಿದೆ.
ನವದೆಹಲಿ (ಸೆ.13): ಫೇಸ್’ಬುಕ್’ನಲ್ಲಿ ಜಾಹಿರಾತು ಮೂಲಕ ಹಣ ಮಾಡಿಕೊಳ್ಳುವವರಿಗೆ, ಸೆನ್ಸೇಶನಲ್ ಹೆಡ್’ಲೈನ್ ಕೊಟ್ಟು ಜನರನ್ನು ವಂಚಿಸುವವರಿಗೆ ಕಡಿವಾಣ ಹಾಕಲು ಫೇಸ್’ಬುಕ್ ಹೊಸ ನೀತಿಯನ್ನು ಪರಿಚಯಿಸಲಿದೆ.
ಫೇಸ್’ಬುಕ್’ನಲ್ಲಿ ಡಿಜಿಟಲ್ ಜಾಹಿರಾತುಗಳನ್ನು ಹರಿಯಬಿಡಲಾಗುತ್ತಿದ್ದು ತಿಂಗಳಿಗೆ 2 ಬಿಲಿಯನ್’ಗಿಂತಲೂ ಹೆಚ್ಚಿನ ಬಳಕೆದಾರರನ್ನು ಇದು ತಲುಪುತ್ತಿದೆ. ಹಾಗಾಗಿ ನಮ್ಮ ಗ್ರಾಹಕರನ್ನು ನಾವು ತಲುಪಲಾಗುತ್ತಿಲ್ಲ. ಕೆಲವು ಬ್ರಾಂಡೆಡ್ ವಸ್ತುಗಳನ್ನು ಹಾನಿಕಾರಕ ಎಂಬಂತೆ ಬಿಂಬಿಸುವ ಮಾಹಿತಿಯನ್ನು ಹಾಕಿ ಪ್ರಮೋಟ್ ಮಾಡಲಾಗುತ್ತಿದೆ ಎಂದು ಮಾರಾಟಗಾರರಿಂದ ಆರೋಪವನ್ನು ಎದುರಿಸಿತ್ತು.
ನಾವಿದನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದು ನಮ್ಮ ಜಾಹಿರಾತುದಾರರ ನಂಬಿಕೆಯನ್ನು ಉಳಿಸಿಕೊಳ್ಳಲು, ಇನ್ನಷ್ಟು ಹೂಡಿಕೆ ಮಾಡಲು ವಿಶ್ವಾಸ ತುಂಬಲು ನಾವು ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಫೇಸ್’ಬುಕ್ ಪ್ರತಿಕ್ರಿಯಿಸಿದೆ. ಫೇಸ್’ಬುಕ್ ಪಬ್ಲಿಶರ್’ಗಳಿಗೆ ನಿರ್ದಿಷ್ಟ ಗೈಡ್’ಲೈನ್’ಗಳನ್ನು ನೀಡಲಾಗುವುದು ಎಂದು ಸ್ಪಷ್ಟಪಡಿಸಿದೆ.
ದ್ವೇಷಪೂರಿತ ಭಾಷಣ, ಹಿಂಸೆ, ಕೋಮುವಾದ, ಭಯೋತ್ಪಾದನೆಯನ್ನು ಪ್ರಚೋದಿಸುವಂತಹ ಯಾವುದೇ ವಿಚಾರಗಳಿಗೆ ಅವಕಾಶ ನೀಡುವುದಿಲ್ಲ. ಅಂತದ್ದೇನಾದರೂ ಕಂಡುಬಂದರೆ ನಾವದನ್ನು ಕೂಡಲೇ ತೆಗೆದು ಹಾಕುತ್ತೇವೆ ಎಂದು ಹೇಳಿದೆ.
