ವಿಜಯಪುರದ ವಜ್ರಹನುಮಾನ ನಗರದ ನಿವಾಸಿ. ಮೂರು ತಿಂಗಳ ಹಿಂದೆ ರಂಗಪ್ಪ ಅವ್ರಿಗೆ ಎಡಗಣ್ಣು ಸರಿಯಾಗಿ ಕಾಣಿಸುತ್ತಿಲ್ಲವೆಂದು ಮೀನಾಕ್ಷಿ ಚೌಕ್'ನಲ್ಲಿರುವ ಕಣಬೂರು ಕಣ್ಣಿನ ಆಸ್ಪತ್ರೆಯಲ್ಲಿ ತೊರಿಸಲು ಹೋಗಿದ್ದಾರೆ. ಕಣ್ಣನ್ನು ಪರೀಕ್ಷೆಗೊಳಪಡಿಸಿ ಪೊರೆ ಬಂದಿದೆಯೆಂದು ವೈದ್ಯ ಆನಂದ ಕಣಬೂರು ಆಪರೇಷನ್ ಮಾಡಿ ಲೆನ್ಸ್ ಹಾಕಿ ಕಳಿಸಿದ್ದಾರೆ.
ವಿಜಯಪುರ(ಜ.31): ಕಣ್ಣು ಮಂಜಾಗಿ ಕಾಣ್ತಿವೆ ಎಂದು ವೈದ್ಯರ ಬಳಿ ಹೊದರೆ, ಇಲ್ಲೋರ್ವ ವೈದ್ಯ ಮಹಾಶಯ ಒಂದು ಕಣ್ಣನ್ನೇ ತೆಗೆದಿದ್ದಾನೆ. ಈ ಕಣ್ಣಿನ ಡಾಕ್ಟರ್'ನ ಅವಾಂತರ ನಡೆದಿರೊದು ಬಿಸಿಲು ನಾಡು ವಿಜಯಪುರದಲ್ಲಿ. ಹೀಗೆ ಎಡಗಣ್ಣನ್ನು ಕಳೆದುಕೊಂಡು ದೃಷ್ಟಿಹೀನನಾಗಿರುವ ಈ ಇಳಿವಯಸ್ಸಿನ ವೃದ್ದನೇ 57 ವರ್ಷದ ರಂಗಪ್ಪ ಕೆಂಗರ್.
ವಿಜಯಪುರದ ವಜ್ರಹನುಮಾನ ನಗರದ ನಿವಾಸಿ. ಮೂರು ತಿಂಗಳ ಹಿಂದೆ ರಂಗಪ್ಪ ಅವ್ರಿಗೆ ಎಡಗಣ್ಣು ಸರಿಯಾಗಿ ಕಾಣಿಸುತ್ತಿಲ್ಲವೆಂದು ಮೀನಾಕ್ಷಿ ಚೌಕ್'ನಲ್ಲಿರುವ ಕಣಬೂರು ಕಣ್ಣಿನ ಆಸ್ಪತ್ರೆಯಲ್ಲಿ ತೊರಿಸಲು ಹೋಗಿದ್ದಾರೆ. ಕಣ್ಣನ್ನು ಪರೀಕ್ಷೆಗೊಳಪಡಿಸಿ ಪೊರೆ ಬಂದಿದೆಯೆಂದು ವೈದ್ಯ ಆನಂದ ಕಣಬೂರು ಆಪರೇಷನ್ ಮಾಡಿ ಲೆನ್ಸ್ ಹಾಕಿ ಕಳಿಸಿದ್ದಾರೆ. ಅದೇ ದಿನ ರಾತ್ರಿ ರಂಗಪ್ಪ ಅವರನ್ನು ಮನೆಗೆ ಕಳಿಸಿದ್ದಾರೆ. ಮಾರನೇ ದಿನ ಬೆಳಿಗ್ಗೆ ಎದ್ದೇಳುತ್ತಿದ್ದಂತೆ ರಂಗಪ್ಪ ಅವರ ಕಣ್ಣಿಂದ ಕೀವು ಸೋರಲು ಆರಂಭಿಸಿದೆ. ತಕ್ಷಣ ಆಸ್ಪತ್ರೆಗೆ ಹೋಗಿ ತೊರಿಸಿದ್ದಾರೆ, ವೈದ್ಯ ತನ್ನ ತಪ್ಪಿನ ಅರಿವಾಗಿ ಪಕ್ಕದ ಮಹಾರಾಷ್ಟ್ರದ ಮಿರಜ್ ಪಟ್ಟಣದ ಶರದ್ ಭೂಮಜ್ ಅವರ ಶಾಂತಿಸರೋಜಿನಿ ಐ ಆಸ್ಪತ್ರೆಗೆ ಕಳಿಸಿದ್ದಾನೆ.
ಅಲ್ಲಿಯೂ ಕೂಡ ರಂಗಪ್ಪನಿಗೆ ಮೂರು ಬಾರಿ ಶಸ್ತ್ರ ಚಿಕಿತ್ಸೆ ಮಾಡಿ ಲಕ್ಷಗಟ್ಟಲೇ ಕಿತ್ತಿದ್ದಾರೆ. ಇಷ್ಟೆಲ್ಲ ಆದರೂ ರಂಗಪ್ಪನಿಗೆ ಹೋದ ಕಣ್ಣು ವಾಪಸ್ ಮಾತ್ರ ಬಂದಿಲ್ಲ. ಈ ಬಗ್ಗೆ ಸ್ವತಃ ರಂಗಪ್ಪನ ಮಗ ಪ್ರಭು, ವೈದ್ಯ ಆನಂದ ಅವರನ್ನು ಮಾಧ್ಯಮಗಳ ಎದುರು ತರಾಟೆಗೆ ತೆಗೆದುಕೊಂಡಿದ್ದಾನೆ. ಸದ್ಯ ಗಾಂಧಿಚೌಕ ಠಾಣೆಯಲ್ಲಿ ಹಾಗೂ ಜಿಲ್ಲಾ ಆರೋಗ್ಯ ಕೇಂದ್ರ ಸೇರಿದಂತೆ ಸಂಬಂಧಪಟ್ಟ ಇಲಾಖೆಗೆ ದೂರು ನೀಡಲು ರಂಗಪ್ಪನ ಕುಟುಂಬ ಮುಂದಾಗಿದೆ.
