ಮಹಾರಾಷ್ಟ್ರ, ಹರಿಯಾಣ: ಚುನಾವಣೋತ್ತರ ಸಮೀಕ್ಷೆ ಅಂದಾಜಿಗೆ ವಿಪಕ್ಷ ಹೈರಾಣ!
ಮಹಾರಾಷ್ಟ್ರ, ಹರಿಯಾಣ ವಿಧಾನಸಭೆ ಚುನಾವಣೆಗೆ ಮತದಾನ ಪ್ರಕ್ರಿಯೆ ಅಂತ್ಯ| ಮಹಾರಾಷ್ಟ್ರದಲ್ಲಿ ಕೇವಲ ಶೇ. 55.4ರಷ್ಟು ಮತದಾನ| ಹರಿಯಾಣದಲ್ಲಿ ಶೇ.61.9ರಷ್ಟು ಮತದಾನ| ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೇ ಚುನಾವಣೋತ್ತರ ಸಮೀಕ್ಷೆ ಬಹಿರಂಗ| ಎಲ್ಲಾ ಚುನಾವಣೋತ್ತರ ಸಮೀಕ್ಷೆಯಲ್ಲೂ ಬಿಜೆಪೊಇಗೆ ಸ್ಪಷ್ಟ ಬಹುಮತದ ಅಭಿಪ್ರಾಯ| ಮಹಾರಾಷ್ಟ್ರ, ಹರಿಯಾಣದಲ್ಲಿ ಮತ್ತೆ ಅಧಿಕಾರದ ಗದ್ದುಗೆ ಏರಲಿರುವ ಆಡಳಿತಾರೂಢ ಬಿಜೆಪಿ| ಎರಡೂ ರಾಜ್ಯಗಳ ಚುನಾವಣೋತ್ತರ ಸಮೀಕ್ಷೆಗಳ ಕಂಪ್ಲೀಟ್ ಡಿಟೇಲ್ಸ್|
ನವದೆಹಲಿ(ಅ.21): ಮಹಾರಾಷ್ಟ್ರ ಹಾಗೂ ಹರಿಯಾಣ ವಿಧಾನಸಭೆ ಚುನಾವಣೆಗೆ ಇಂದು ಮತದಾನ ಪ್ರಕ್ರಿಯೆಗೆ ತೆರೆ ಬಿದ್ದಿದ್ದು, ಮಹಾರಾಷ್ಟ್ರದಲ್ಲಿ ಕೇವಲ ಶೇ. 55.4 ಮತ್ತು ಹರಿಯಾಣದಲ್ಲಿ ಶೇ. 61.9ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಇನ್ನು ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೇ ಚುನಾವಣೋತ್ತರ ಸಮೀಕ್ಷೆಗಳು ಹೊರ ಬಿದ್ದಿದ್ದು, ಎಲ್ಲ ಸಮೀಕ್ಷೆಗಳೂ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರ ಪಡೆಯಲಿರುವುದಾಗಿ ಹೇಳಿವೆ.
"
ಮಹಾರಾಷ್ಟ್ರದ ಒಟ್ಟು 288 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಮೈತ್ರಿಕೂಟ 204 ಕ್ಷೇತ್ರಗಲ್ಲಿ ಜಯ ದಾಖಲಿಸಿದ್ದು, ಕಾಂಗ್ರೆಸ್ ಮೈತ್ರಿಕೂಟ ಕೇವಲ 69 ಸ್ಥಾನಗಳನ್ನಷ್ಟೇ ಗೆಲ್ಲಲಿದೆ. ಇನ್ನುಳಿದ 15 ಕ್ಷೇತ್ರಗಳನ್ನು ಇತರರು ಬಾಚಿಕೊಳ್ಳಲಿದ್ದಾರೆ ಎಂದು ಎಬಿಪಿ-ಸಿವೋಟರ್ ಸಮೀಕ್ಷೆ ತಿಳಿಸಿದೆ.
ಇನ್ನು ಇಂಡಿಯಾ ಟಿವಿ ಸಮೀಕ್ಷೆ ಪ್ರಕಾರ ಮಹಾರಾಷ್ಟ್ರದಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ 230 ಸ್ಥಾನ, ಕಾಂಗ್ರೆಸ್ ಮೈತ್ರಿಕೂಟಕ್ಕೆ 48 ಹಾಗೂ 10 ಸ್ಥಾನಗಳಲ್ಲಿ ಇತರರು ಜಯಗಳಿಸಲಿದ್ದಾರೆ.
ಇನ್ನು ರಿಪಬ್ಲಿಕ್ ಜನ್ ಕಿ ಬಾತ್ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಮಹಾರಾಷ್ರದಲ್ಲಿ ಬಿಜೆಪಿ 135-142, ಶಿವಸೇನೆ 81-88, ಕಾಂಗ್ರೆಸ್ 20-24, ಎನ್‌ಸಿಪಿ-30 ರಿಂದ 35 ಹಾಗೂ ಇತರರು 8-10ಸ್ಥಾನಗಳಲ್ಲಿ ಜಯ ದಾಖಲಿಸಲಿದ್ದಾರೆ.
"
ಅದರಂತೆ ಟೈಮ್ಸ್ ನೌ ಸಮೀಕ್ಷೆ ಪ್ರಕಾರ ಮಹಾರಾಷ್ಟ್ರದಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ 230, ಕಾಂಗ್ರೆಸ್ ಮೈತ್ರಿಕೂಟಕ್ಕೆ 48 ಹಗೂ ಇತರರು 10 ಕ್ಷೇತ್ರಗಳಲ್ಲಿ ಜಯ ಗಳಿಸಲಿದ್ದಾರೆ.
ಇತ್ತ ಹರಿಯಾಣದಲ್ಲೂ ಬಿಜೆಪಿ ಭರ್ಜರಿ ಜಯ ದಾಖಲಿಸಲಿದೆ ಎಂದು ಚುನಾವಣೋತ್ತರ ಸಮೀಕ್ಷೆ ಅಂದಾಜಿಸಿದೆ. ಒಟ್ಟು 90 ಕ್ಷೇತ್ರಗಳ ಪೈಕಿ ಬಿಜೆಪಿ 71, ಕಾಂಗ್ರೆಸ್ 11 ಹಾಗೂ ಇತರು 8 ಸ್ಥಾನಗಳಲ್ಲಿ ಜಯ ದಾಖಲಿಸಲಿದ್ದಾರೆ ಎಂದು ಟೈಮ್ಸ್ ನೌ ಸಮೀಕ್ಷೆ ತಿಳಿಸಿದೆ.
ಅದರಂತೆ ರಿಪಬ್ಲಿಕ್ ಜನ್ ಕಿ ಬಾತ್ ಸಮೀಕ್ಷೆ ಪ್ರಕಾರ ಹರಿಯಾಣದಲ್ಲಿ ಬಿಜೆಪಿ 52-63, ಕಾಂಗ್ರೆಸ್ 19-15 ಹಾಗೂ ಇತರರು 7-9 ಸ್ಥಾನಗಳಲ್ಲಿ ಜಯ ದಾಖಲಿಸಲಿದ್ದಾರೆ.
ಇನ್ನು NEWX-POLSTRAT ಸಮೀಕ್ಷೆ ಪ್ರಕಾರ ಹರಿಯಾಣದಲ್ಲಿ ಬಿಜೆಪಿ 77 ಸ್ಥಾನಗಳನ್ನು ಬಾಚಲಿದ್ದು, 11 ಸ್ಥಾನಗಳಲ್ಲಿ ಮಾತ್ರ ಕಾಂಗ್ರೆಸ್ ವಿಜಯಪತಾಕೆ ಹಾರಿಸಲಿದೆ. ಅದರಂತೆ ಕೇವಲ 2 ಸ್ಥಾನಗಳು ಇತರರ ಪಾಲಾಗಲಿವೆ.
"
ಮಹಾರಾಷ್ಟ್ರ ಮತ್ತು ಹರಿಯಾಣದ ಚುನಾವಣೋತ್ತರ ಸಮೀಕ್ಷೆಗಳ ಪಟ್ಟಿಯನ್ನು ಕೆಳಗೆ ಕೊಡಲಾಗಿದೆ.
ಮಹಾರಾಷ್ಟ್ರ
ABP -C VOTER ಸಮೀಕ್ಷೆ
204 ಸ್ಥಾನಗಳಲ್ಲಿ ಬಿಜೆಪಿ ಮೈತ್ರಿ ಕೂಟಕ್ಕೆ ಗೆಲುವು
ಕಾಂಗ್ರೆಸ್ ಮೈತ್ರಿಕೂಟಕ್ಕೆ 69 ಸ್ಥಾನ
ಇತರರು 15 ಸ್ಥಾನಗಳಲ್ಲಿ ಗೆಲುವು
NEWX-POLSTRAT
ಬಿಜೆಪಿ:144-150
ಶಿವಸೇನೆ:44-50
ಕಾಂಗ್ರೆಸ್: 40-50
ಎನ್‌ಸಿಪಿ: 34-39
ಇತರರು: 6-10
INDIA TV ಸಮೀಕ್ಷೆ
ಬಿಜೆಪಿ ಮೈತ್ರಿಕೂಟ- 230 ಸ್ಥಾನ
ಕಾಂಗ್ರೆಸ್-48 ಸ್ಥಾನ ದಲ್ಲಿ ಗೆಲುವು
ಇತರರು-10 ಸ್ಥಾನ
JAN KI BATH- REPUBLIC ಸಮೀಕ್ಷೆ
ಬಿಜೆಪಿ: 135-142 ಸ್ಥಾನ
ಶಿವಸೇನೆ: 81- 88 ಸ್ಥಾನ
ಕಾಂಗ್ರೆಸ್: 20-24 ಸ್ಥಾನ
ಎನ್‌ಸಿಪಿ: 30-35 ಸ್ಥಾನ
ಇತರರು: 8- 12 ಸ್ಥಾನ
"
ಹರಿಯಾಣ
NEWX-POLSTRAT
ಬಿಜೆಪಿ- 77 ಸ್ಥಾನ
ಕಾಂಗ್ರೆಸ್- 11 ಸ್ಥಾನ
ಇತರರು- 2 ಸ್ಥಾನ
TIMES NOW ಸಮೀಕ್ಷೆ
ಬಿಜೆಪಿ- 77 ಸ್ಥಾನ
ಕಾಂಗ್ರೆಸ್- 11 ಸ್ಥಾನ
ಇತರರು- 2 ಸ್ಥಾನ
JAN KI BATH- REPUBLIC ಸಮೀಕ್ಷೆ
ಬಿಜೆಪಿ: 52-63 ಸ್ಥಾನ
ಕಾಂಗ್ರೆಸ್:19-15 ಸ್ಥಾನ
ಇತರರು: 9-7
"